ಸ್ಯಾಂಡಲ್ವುಡ್ ನಟಿ ಅನುಪ್ರಭಾಕರ್ ಬೆಳ್ಳಿತೆರೆಗೆ ಮತಚತೆ ಕಮ್ ಬ್ಯಾಕ್ ಆಗಿರುವ ಪೋಟೋ ಒಂದನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ರು. ಇದೀಗ ಆ ಪೋಟೋಗೆ ವ್ಯಕ್ತಿಯೊಬ್ಬ ನಿಮಗೆ ವಯ್ಯಸ್ಸಯ್ತು ಎಂಬುವುದಾಗಿ ಕಾಲೆಳೆದು ಟೀಕೆ ಮಾಡಿದ್ದಾನೆ.

ಹೌದು, ಮಗು ಆದ ಬಳಿಕ ನಟಿ ಅನು ಪ್ರಭಾಕರ್ ಯಾವುದೇ ಹೊಸ ಸಿನಿಮಾ ಕೈಗೆತ್ತಿಕೊಂಡಿರಲಿಲ್ಲ. ಕೊನೆಯದಾಗಿ ‘ಅನುಕ್ತ’ ಚಿತ್ರದಲ್ಲಿ ಅನು ಪ್ರಭಾಕರ್ ಕಾಣಿಸಿಕೊಂಡಿದ್ದರು. ಇನ್ನು
ಮಗುವಿನ ಆರೈಕೆಯಲ್ಲಿರುವ ಅನು ಪ್ರಭಾಕರ್ ಮತ್ತೆ ಯಾವಾಗ ಬಣ್ಣ ಹಚ್ಚುತ್ತಾರೆ ಎಂದು ಅಭಿಮಾನಿಗಳು ಕಾಯ್ತಿದ್ದರು. ನಿರೀಕ್ಷೆಯಂತೆ ಅನು ಪ್ರಭಾಕರ್ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡಲು ಸಜ್ಜಾದರು. ಈಗಾಗಲೇ ಒಂದೆರಡು ಪ್ರಾಜೆಕ್ಟ್ ಸಹಿ ಮಾಡಿರುವ ಅನು ಇತ್ತೀಚಿಗಷ್ಟೆ ಫೋಟೋವೊಂದು ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದರು.ಆದರೆ, ಆ ಫೋಟೋಗೆ ವ್ಯಕ್ತಿಯೊಬ್ಬ ”ಈಗ ಸ್ವಲ್ಪ ವಯಸ್ಸಾಗಿದೆ ಬಿಡಿ ಸಾಕು” ಎಂದು ಕಾಲೆಳೆದಿದ್ದಾನೆ.

ಅಣುಕಿಸಿ ಕಾಮೆಂಟ್ ಮಾಡಿದ ವ್ಯಕ್ತಿಗೆ ಉತ್ತರಿಸಿದ ಅನು ಪ್ರಭಾಕರ್ ”ವಯಸ್ಸು ಆದ್ರೆ ಕೆಲಸ ನಿಲ್ಲಿಸಬೇಕಾ ಮಧು …?? ನೀವು ನನ್ನ ಸಿನಿಮಾ ನೋಡೋ ಅವಶ್ಯಕತೆ ಇಲ್ಲ ಬಿಡಿ …!!! ಕಲಾವಿದರಾಗಿ ನಮ್ಮನ್ನಾ ಇಷ್ಟಾ ಪಡೋರು ನೋಡತಾರೆ!” ಎಂದು ತಿರುಗೇಟು ನೀಡಿದ್ದಾರೆ.

ಇನ್ನು ನಟ್ಟಿಗರು ಸಹ ಅನು ಪ್ರಭಾಕರ್ ಅವರಿಗೆ ಸಪೋರ್ಟ್ ಮಾಡಿದ್ದಾರೆ. ‘ಸರಿಯಾಗಿ ಹೇಳಿದ್ದೀರಿ ಮೇಡಂ… ನಮ್ಮ ಜನಕ್ಕೆ ಹೀರೋ ಮುಖದ ಮೇಲೆ ನೆರಿಗೆ ಬಂದ್ರೂ, ತಲೆ ಕೂದಲು ಬೆಳ್ಳಗಾದ್ರೂ, ಮಗಳ ವಯಸ್ಸಿನ ನಾಯಕಿ ಜೊತೆ ನಟಿಸಿದ್ರು ಇಷ್ಟ…ಅದೇ ನಾಯಕಿಯರು ಮದುವೆ ಆದಕೂಡಲೇ ವಯಸ್ಸಾಯ್ತು ಅಂತಾರೆ… ನಾಯಕಿಯ ವಯಸ್ಸಿಗೆ ಮಾತ್ರ ಬೆಲೆನಾ.. ಕಲೆಗೆ ಕಲಾವಿದರಿಗೆ ಗೌರವ ಕೊಡಬೇಕು, ಅವರ ವಯಸ್ಸಿನ ಬಗ್ಗೆ ನಿನಗೇಕೆ ಚಿಂತೆ, ಕರ್ನಾಟಕ ಜನತೆಯನ್ನ ತಮ್ಮ ಅಮೂಲ್ಯವಾದ ನಟನೆ ಮುಕಾಂತರ ರಂಜಿಸುತ್ತಿದ್ದರೆ, ನೀನು ಧನ್ಯವಾದ ಹೇಳು ಅದು ಬಿಟ್ಟು, ನಿಮ್ಮ ಕುಟುಂಬದವರು ಇದ್ದಿದ್ದರೆ ಹೀಗೆ ಪ್ರಶ್ನೆ ಮಾಡುತ್ತೀರಾ. ಅವಿವೇಕಿತನದ ಮಾತು, ನೀವು ತಲೆ ಕೆಡಿಸ್ಕೊಬೇಡಿ ಮೇಡಂ.” ಎಂದು ಇನ್ನೊಬ್ಬರು ಬೆಂಬಲಿಸಿದ್ದಾರೆ.

ಇನ್ನು ನೆನಪಿರಲಿ ಪ್ರೇಮ್ ನಟಿಸುತ್ತಿರುವ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’ ಚಿತ್ರದಲ್ಲಿ ವಿಶೇಷ ಪಾತ್ರ ಮಾಡುತ್ತಿರು ಅನು ಪ್ರಭಾಕರ್ ಡಾಕ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಾದ ಬಳಿಕ ಬರಹಗಾರ್ತಿ ಸಾರಾ ಅಬೂಬಕ್ಕರ್ ಅವರ ಕಾದಂಬರಿ ಚಿತ್ರ ‘ಸಾರಾವಜ್ರ’ದಲ್ಲಿ ನಟಿಸುತ್ತಿದ್ದಾರೆ.