ಅಯ್ಯಯ್ಯೋ ಹೀಗೊಂದು ಡೌಟ್‌ ಬರಲು ಕಾರಣ, ಮಜಾ ಟಾಕೀಸ್‌ನ ಫೀಮೇಲ್‌ ಲೀಡ್‌ ರಾಣಿ ಪಾತ್ರಧಾರಿ ಶ್ವೇತಾ ಚಂಗಪ್ಪ ತಮ್ಮ ಗರ್ಭಿಣಿ ಫೋಟೋಶೂಟ್‌ಗಳನ್ನ ಸೋಷಿಯಲ್‌ ಮಿಡಿಯಾದಲ್ಲಿ ಅಪ್‌ಲೋಡ್‌ ಮಾಡಿ, ಅದಕ್ಕೆ ಅಭಿಮಾನಿಯೊಬ್ಬರು ಮಾಡಿದ ಕಮೆಂಟ್‌. ಹೌದು ಸೃಜನ್‌ ಲೋಕೇಶ್‌ ಹಾಗೂ ಶ್ವೇತಾ ಚಂಗಪ್ಪ ಆನ್‌ಸ್ಕ್ರೀನ್‌ ಜೋಡಿಯಾಗಿದ್ರು, ಶ್ವೇತಾ ಚಂಗಪ್ಪ ತಮ್ಮ ಫೋಟೋ ಪೋಸ್ಟ್‌ ಮಾಡಿದ್ರೆ ಸೃಜನ್‌ ಫೈನಲಿ ತಂದೆಯಾಗ್ತಾ ಇದ್ದಾರೆ, ಅವ್ರಿಗೆ ಅಭಿನಂದನೆಗಳು ಅಂದಿದ್ದಾರೆ. ಇದಕ್ಕೆ ಶ್ವೇತಾ ಖಾರವಾಗೇ ಪ್ರತಿಕ್ರಿಯಎ ನೀಡಿದ್ದಾರೆ.ಇತ್ತೀಚೆಗಷ್ಟೆ ಶ್ವೇತಾ ಅವರು ಕೊಡಗು ಶೈಲಿಯ ಉಡುಪು ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.

ಪರ್ಸನಲ್‌ ಹಾಗೂ ಪ್ರೊಫೆಷನಲ್‌ ಲೈಫ್‌ಗೂ ವೆತ್ಯಾಸ ಗೊತ್ತಾ?

ಈ ಕಮೆಂಟ್‌ಗ ರಿಪ್ಲೈ ಮಾಡಿರೋ ಶ್ವೇತಾ  “ನೀವು ಸೃಜನ್ ಲೋಕೇಶ್ ಅವರಿಗೆ ಅಭಿನಂದನೆಯನ್ನು ಯಾಕೆ ಹೇಳುತ್ತೀರಿ. ನಾನು ನನ್ನ ವೈಯಕ್ತಿಕ ಫೋಟೋವನ್ನು ಪೋಸ್ಟ್ ಮಾಡಿದ್ದೀನಿ. ನೀವು ತಮಾಷೆ ಎಂದುಕೊಂಡಿದ್ದೀರಾ, ಇದು ತಮಾಷೆ ಅಲ್ಲ. ಮೊದಲಿಗೆ ವೈಯಕ್ತಿಕ ಮತ್ತು ವೃತ್ತಿಪರ ವಿಚಾರಗಳ ನಡುವಿನ ವ್ಯೆತ್ಯಾಸವನ್ನು ಅರ್ಥಮಾಡಿಕೊಳ್ಳಲು ನೀವು ಸೂಕ್ಷ್ಮತೆಯನ್ನು ಹೊಂದಬೇಕು.” ಎಂದು ಪ್ರತಿಕ್ರಿಯಿಸುವ ಮೂಲಕ ಕಮೆಂಟ್‌ ಕೋರನಿಗೆ ಕರಂಟ್‌ ವಾರ್ನಿಂಗ್‌ ಕೊಟ್ಟಿದ್ದಾರೆ.