ಪುನೀತ್ ರಾಜ್ ಕುಮಾರ್ ನಿರ್ಮಾಣದಲ್ಲಿ ಮೂಡಿಬಂದ ಮಾಯಾಬಜಾರ್ ಜನರಿಗೆ ಒಂದೋಳ್ಳೆ ಸಂದೇಶದೊಂದಿಗೆ ಎಂಟಟೈನ್ಮೆಂಟ್ ನೀಡುತ್ತಿದೆ.ಹೌದು ಹಣ ಬೇಕು ಅಂದರೆ ಇಲ್ಲಿ ಯಾರು ಏನ್ ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ. ಯಾವನ್ ಹೆಂಗ್ ಬೇಕಾದರು ಹಾಳಾಗಿ ಹೋಗಲಿ ಹಣ ಮಾಡೋಣ ಎನ್ನುವುದೆ ಮಾಯಾಬಜಾರ್ ಸಿನಿಮಾ ಲೋಕದ ಯೋಚನೆ. ಇಲ್ಲಿ ಎಮೋಷನ್, ಥ್ರಿಲ್ಲಿಂಗ್ ಜೊತೆಗೆ ಮಿತವಾದ ಕಾಮಿಡಿ ಕೂಡ ಇದೆ.

ಇನ್ನು ಇಂದಿನ ಜೀವನದ ರಿಯಾಲಿಟಿಗೊಂದಿಷ್ಟು ಬೆಳಕು ಚೆಲ್ಲುವ ಫೇಮ್ ಗಳು ಕೂಡ ಇವೆ.. ಕೊಳಗೇರಿಯಲ್ಲಿ ಜೀವಿಸುತ್ತಿರುವ ವ್ಯಕ್ತಿ ಕುಬೇರ (ರಾಜ್ ಬಿ ಶೆಟ್ಟಿ) ಹೆಸರಿಗೆ ತಕ್ಕಹಾಗೆ ಕುಬೇನಾಗಬೇಕು ಎನ್ನುವ ಕನಸು ಹೊತ್ತು ನನಸು ಮಾಡಿಕೊಳ್ಳುವ ಹುಮ್ಮಸ್ಸಿನಲ್ಲಿ ಯಾವ ಹಾದಿಯನ್ನು ತುಳಿಯಲು ಹಿಂಜರಿಯದ ಮನುಷ್ಯನಾಗಿರುತ್ತಾನೆ. ಮತ್ತೊಂದೆಡೆ ನ್ಯಾಯ, ನೀತಿ, ನಿಷ್ಠೆ ಅಂತ ಬದುಕುತ್ತಿರುವ ಪೊಲೀಸ್ ಆಫೀಸರ್ ಜೋಸೆಫ್ (ಅಚ್ಯುತ್ ಕುಮಾರ್). ಕೆಲಸವೆ ದೇವರೆಂದು ನಂಬಿ ಎಷ್ಟೆ ಕಷ್ಟ ಬಂದರು ಅನ್ಯಾಯದ ದಾರಿ ಹಿಡಿಯದೆ ನಿಷ್ಠೆಯಿಂದ ಕೆಲಸ ಮಾಡುವ ಖಡಕ್ ಆಫೀಸರ್.

ಇನ್ನು ಮಯಾಬಜಾರ್ ರಾಮಕೃಷ್ಣ ರೆಡ್ಡಿಯ ಚೊಚ್ಚಲ ಸಿನಿಮಾವಾದ್ರು, ನಿರೀಕ್ಷೆಯನ್ನ ಮೀರಿಸಿದೆ. ಕಳ್ಳ ಪೊಲೀಸ್ ಆಟದ ನಡುವೆ ನಡೆಯುವ ಮತ್ತೊಂದು ಪ್ರೇಮ ಕಥೆ. ಕೆಲಸ ವಿಲ್ಲದೆ ಖಾಲಿ ಕೂತಿರುವ ರಾಜಿ (ವಸಿಷ್ಠ ಸಿಂಹ) ಮತ್ತು ಶ್ರೀಮಂತ ಮನೆಯ ಹುಡುಗಿ ಚೈತ್ರಾ ರಾವ್ ನಡುವಿನ ಪ್ರೀತಿ ಕಥೆಯು ನೋಡುಗರ ಕುತೂಹಲವನ್ನು ಹೆಚ್ಚಿಸುತ್ತ ಹೋಗುತ್ತೆ. ಈ ಮೂವರು ಬದುಕಿನ ಭಿನ್ನ ಕಥೆಗಳು ಮಾಯಾಬಜಾರ್ ಲೋಕದಲ್ಲಿ ಒಂದಾಗುತ್ತೆ.

ಕರ್ತವ್ಯವೆ ದೇವರೆಂದು ನಂಬಿ ನಿಯತ್ತಿನಿಂದ ಬದುಕುತ್ತಿದ್ದ ಪೊಲೀಸ್ ಆಫೀಸರ್ ಜೋಸೆಫ್, ಪತ್ನಿ ಉಷಾ (ಸುಧಾರಾಣಿ)ಗೆ ಕ್ಯಾನ್ಸರ್ ಇರುವುದು ಗೊತ್ತಾಗುತ್ತೆ. ಮಗನ ಶಾಲೆಯ ಫೀಸ್ ಕಟ್ಟಲು ಒದ್ದಾಡುತ್ತಿದ್ದ ಜೋಸೆಫ್ ಪತ್ನಿಯ ಆಸ್ಪತ್ರೆಯ ಖರ್ಚು ಹೊಂದಿಸಲು ಪರದಾಡುವ ಸ್ಥಿತಿಗೆ ಬರುತ್ತಾರೆ. ಹೇಗಾದರು ಮಾಡಿ ಪತ್ನಿಯನ್ನು ಉಳಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ನ್ಯಾಯದ ದಾರಿ ಬಿಟ್ಟು ಕುಬೇರನ ಜೊತೆ ಸೇರಿಕೊಳ್ಳುತ್ತಾರೆ.

ಜೋಸೆಫ್ ಅಧಿಕಾರ ಕುಬೇರನ ಕಳ್ಳ ಬುದ್ದಿ, ಇಬ್ಬರು ಸೇರಿ ಹಣ ದೋಚಲು ಪ್ರಾರಂಭಿಸುತ್ತಾರೆ. ಇದರ ನಡುವೆ ರಾಜಿ ಬಳಿ ತಗಲಾಕಿಕೊಂಡು ಕೊನೆಗೆ ಆತನನ್ನು ಇವರ ಜೊತೆ ಸೇರಿಸಿಕೊಳ್ಳುತ್ತಾರೆ. ಒಟ್ನಲ್ಲಿ ಮೂವರು ಹಣದ ಹಿಂದೆ ಓಡಲು ಪ್ರಾರಂಭಿಸುತ್ತಾರೆ. ಈ ಮೂವರು ಹಣಕ್ಕಾಗಿ ಎಷ್ಟು ಕಷ್ಟಪಡುತ್ತಾರೆ ಯಾವೆಲ್ಲ ಪ್ಲಾನ್ ಮಾಡುತ್ತಾರೆ ಎನ್ನುವುದೆ ಇಲ್ಲಿ ಇಂಟ್ರಸ್ಟಿಂಗ್. ಹಣದ ಹಿಂದೆ ಓಡುತ್ತಿದ್ದವರಿಗೆ ನೋಟ್ ಬ್ಯಾನ್ ಮತ್ತಷ್ಟು ಆಘಾತ ನೀಡುತ್ತೆ. ಇದರಿಂದ ಯಾವೆಲ್ಲ ಸಮಸ್ಯೆ ಎದುರಿಸುತ್ತಾರೆ ಎನ್ನುವುದು ಗೊತ್ತಾಗಬೇಕಾದರೆ ಚಿತ್ರಮಂದಿರಕ್ಕೆ ಹೋಗಿ ನೋಡಬೇಕು.
ಎಸಿಪಿ ಅಕೋಶ್ ಕುಮಾರ್ ಪಾತ್ರದಲ್ಲಿ ಪ್ರಕಾಶ್ ರೈ ಕೂಡ ನೋಡುಗರ ಗಮನ ಸೆಳೆಯುತ್ತಾರೆ. ಸಾಧು ಕೋಕಿಲ ಪಾತ್ರ ಕಡಿಮೆ ಇದ್ದರು ಪಟಾಕಿ ಪಾಂಡು ಆಗಿ ವೀಕ್ಷಕರ ಮನಗೆದ್ದಿದ್ದಾರೆ. ಎಂದಿನಂತೆ ಅಚ್ಯುತ್ ಕುಮಾರ್ ಅಭಿನಯ ಅದ್ಭುತ, ಕಳ್ಳನಾಗಿ ರಾಜ್ ಬಿ ಶೆಟ್ಟಿ ಮತ್ತು ಮೊದಲ ಬಾರಿಗೆ ದೊಡ್ಡ ಪರದೆಯಲ್ಲಿ ಮಿಂಚಿರುವ ಚೈತ್ರ ರಾವ್ ಹಾಗೂ ವಸಿಷ್ಠ ಸಿಂಹ ಕೂಡ ಅದ್ಭುತವಾಗಿ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರದದಲ್ಲಿ ಹುಚ್ಚ ವೆಂಕಟ್ ಗೆ ಒಂದು ಉತ್ತಮವಾದ ಪಾತ್ರ ನೀಡಿದ್ದಾರೆ. ಒಟ್ಟಾರೆಯಾಗಿ ಸಿನಿಮಾ ಪಕ್ಕ ಎಂಟರ್ಟೈನಿಂಗ್ ಆಗಿದ್ದು ಕೊಟ್ಟ ಕಾಸಿಗೆ ಯಾವುದೆ ಮೋಸವಿಲ್ಲ.