ರವಿಮಾಮ ಅಂದ್ರೆ ಲವ್ವು, ರೋಜಾ ಹೂವು, ಚೆಲವೆಯರು ಚೆಲುವು ಅನ್ನೋದು ವಾಡಿಕೆ. ಅದೇ ರವಿಚಂದ್ರನ್‌ ಸಿನಿಮಾ ನೋಡೋಕೆ ಬಂದೋರ ಬೇಡಿಕೆ. ಆದ್ರೆ ಮಲ್ಲ ಸಿನಿಮಾದಲ್ಲಿನ ಕ್ರೇಜಿಸ್ಟಾರ್‌ ಅವತಾರಕ್ಕೂ ಜನ ಫುಲ್‌ ಮಾರ್ಕ್ಸ್‌ ನೀಡಿದ್ರು. ಮಲ್ಲ ಸಿನಿಮಾದ ಕ್ಲಾಸ್‌ ಹಾಗೂ ಮಾಸ್‌ ಲುಕ್‌ಗೆ ಜನ ಫಿದಾ ಆಗಿದ್ರು. ಈಗ ಮತ್ತದೇ ಮಾಸ್‌ ಖಡಕ್‌ ಲುಕ್‌ನಲ್ಲಿ ರವಿಚಂದ್ರನ್‌ ತೆರೆಗೆ ಬರ್ತಾ ಇದ್ದಾರೆ. ರವಿ ಬೋಪ್ಪಣ್ಣ ಅಂತ ಹೆಸರಿಟ್ಟಿರೋ ಸಿನಿಮಾದಲ್ಲಿ ಉದ್ದ ಉದ್ದ ಗಡ್ಡ ಬಿಟ್ಟು, ಕಂಗಣ್ಣಿನ ಲುಕ್‌ ಕೊಟ್ಟು ಅಬ್ಬರಿಸ್ತಾ ಇದ್ದಾರೆ ಕ್ರೇಜಿಸ್ಟಾರ್‌. ಅಂದಹಾಗೆ ಈ ಸಿನಿಮಾವನ್ನ ದೃಶ್ಯ-೨ ಅಂತ ಹೇಳಲಾಗ್ತಾ ಇದೆ.

ravi bopanna kannadapichhar

ಕಿಚ್ಚ ಸುದೀಪ್‌ ಲಾಯರ್‌ ಪಾತ್ರದಲ್ಲಿ..!

ಸಸ್ಪೆನ್ಸ್‌ ಥ್ರಿಲ್ಲರ್‌ ರವಿ ಬೋಪಣ್ಣ ಸಿನಿಮಾದಲ್ಲಿ ಕಿಚ್ಚ ಸುದೀಪ್‌ ಒಂದು ವಿಶೇಷ ಪಾತ್ರದಲ್ಲಿ ನಟಿಸ್ತಾ ಇದ್ದಾರೆ. ಮಿಸೆ ತಿರುವುತ್ತ ಮೊದಲ ಬಾರಿಗೆ ಬಿಳಿ ಗಡ್ಡ ಬಿಟ್ಟು, ಉಗ್ರಾವತಾರ ತೋರಿರೋ ರವಿಮಾಮನ ಫಸ್ಟ್‌ ಲುಕ್‌ ಗಣೇಶ ಹಬ್ಬದ ಪ್ರಯುಕ್ತ ರಿಲೀಸ್‌ ಆಗಿದೆ. ರವಿ ಬೊಪಣ್ಣ ಸಿನಿಮಾದಲ್ಲಿ ರವಿಚಂದ್ರನ್‌ ನಟಿಸೋದ್ರ ಜೊತೆಗೆ ಡೈರೆಕ್ಷನ್‌ ಕ್ಯಾಪ್‌ ತೊಟ್ಟಿರೋದು  ವಿಶೇಷ. ಸಿನಿಮಾದ ಚಿತ್ರೀಕರಣ ಸಧ್ಯ ಬಿರುಸಿನಿಂದ ಸಾಗಿದ್ದು, ರವಿಚಂದ್ರನ್‌ ಆದಷ್ಟು ಬೇಗ ಈ ಸಿನಿಮಾವನ್ನ ತೆರೆಗೆ ತರೋ ಪ್ರಯತ್ನದಲ್ಲಿದ್ದಾರೆ.