ಚಿತ್ರ : ನಾನು ಮತ್ತು ಗುಂಡ
ತಾರಾಗಣ: ಶಿವರಾಜ್ ಕೆ.ಆರ್ ಪೇಟೆ, ಸಂಯುಕ್ತ ಹೊರನಾಡು, ಜಿಜಿ ಮತ್ತು ಸಿಂಬಾ ( ಶ್ವಾನ)
ನಿರ್ದೇಶನ: ಶ್ರೀನಿವಾಸ್ ತಿಮ್ಮಯ್ಯ
ಸಂಭಾಷಣೆ: ಶರತ್ ಚಕ್ರವರ್ತಿ
ಸಂಗೀತ : ಕಾರ್ತಿಕ್ ಶರ್ಮಾ
ಛಾಯಾಗ್ರಹಣ: ಚಿದಾನಂದ ಹೆಚ್.ಕೆ
ನಿರ್ಮಾಣ: ರಘು ಹಾಸನ್ (Poem Pictures)

ಸ್ಟೋರಿ ಲೈನ್
ಲವ್ ಮ್ಯಾರೇಜ್ ಆಗಿ ಮಕ್ಕಳಾಗ್ದೇ ಫೀಲಿಂಗಲ್ಲಿರೋ ಲೋಕಲ್ ಆಟೋ ಡ್ರೈವರ್ ಶಂಕ್ರ. ಈತನ ಲೈಫಿನಲ್ಲೊಂದು ಆಚಾನಕ್ ತಿರುವು. ಆವೊಂದು ರಾತ್ರಿ ಫೀಲಿಂಗ್ ನಲ್ಲಿ ಕುಡಿದು ಅಮಲಿನಲ್ಲಿರೋವಾಗ ಆತನ ಬಳಿ ಬರೋ ಅಪರೂಪದ ಅತಿಥಿ ಗುಂಡ (ಶ್ವಾನಮರಿ).ಶಂಕರನ ಅತಿಥ್ಯದ ನಿಯತ್ತಯನ್ನ ಕಾಯೋ ಗುಂಡ. ಆ ನಿಯತ್ತಿನ ಬಾಂಧವ್ಯದಿಂದ ಶಂಕ್ರನ ಮನೆಯಲ್ಲಿ ಬಿರುಗಾಳಿ, ನಡುವೆ ಮನುಷ್ಯ ಪ್ರೀತಿಗಿಂತ ಶ್ವಾನ ಪ್ರೀತಿಯೇ ಶ್ರೇಷ್ಠ ಅನ್ನೋ ಮನುಷ್ಯ ಮತ್ತು ಸಾಕು ಪ್ರಾಣಿಯ ನಡುವಿನ ಬಾಂಧವ್ಯದ ಕಥೆಯೇ ನಾನು ಮತ್ತು ಗುಂಡ ಚಿತ್ರದ ಓನ್ ಲೈನ್ ಸ್ಟೋರಿ. ಅಂದ್ಹಾಗೆ ಇದು ನೈಜ ಘಟನೆಯನ್ನಾಧರಿಸಿ ಮಾಡಿರೋ ಸಿನಿಮಾ. ಈ ಕಥೆಯಲ್ಲಿ ತಾಜಾತನವಿದೆ. ಸತ್ವವಿದೆ. ಎಲ್ಲಾದಕ್ಕಿಂತ ಹೆಚ್ಚಾಗಿ ಎಮೋಷಿನಲ್ ಅಂಶ ಗಾಢವಾಗಿದೆ.

ಹೈಲೈಟ್ಸ್
ನಾನು ಮತ್ತು ಗುಂಡ ಚಿತ್ರದ ಟ್ಯಾಗ್ ಲೈನ್ ಹೇಳುವಂತೆ ನಿಜಕ್ಕೂ ಇದೊಂದು ಮರೆಯಲಾಗದ ಕಥೆ. ಪ್ರಾಣಿ ಪ್ರಿಯರಿಗೆ, ಅದ್ರಲ್ಲೂ ನಾಯಿಯನ್ನ ಸಾಕಿರೋರಿಗೆ ಅದ್ರ ನಿಯತ್ತು ಪ್ರೀತಿ ಗೊತ್ತಿರೋರ ಹೃದಯಸ್ಪರ್ಶಿಸುತ್ತೆ. ನಗುವಿನಿಂದ ಶುರುವಾಗಿ, ಕೌತುಕ ತಿರುವುಗಳೊಂದಿಗೆ, ಭಾವುಕಥೆಯ ಮಡುವಿನಲ್ಲಿ ಮುಳುಗಿ ತೇಲಿಸೋ ಭಾವನಾತ್ಮಕ ಸಿನಿಮಾ ನಾನು ಮತ್ತು ಗುಂಡ.
ರಘುಹಾಸನ್ ಮತ್ತು ಶ್ರೀನಿವಾಸ್ ತಿಮ್ಮಯ್ಯರ ಕಥೆ ಚಿತ್ರಕಥೆ ವಿಶಿಷ್ಠವಾಗಿದೆ. ಶ್ರೀನಿವಾಸ್ ತಿಮ್ಮಯ್ಯ ಚೊಚ್ಚಲ ಚಿತ್ರದಲ್ಲಿ ತಮ್ಮೊಳಗಿನ ಅಷ್ಟು ಸಿನಿಮೋತ್ಸಾಹವನ್ನ ಹೊರಹಾಕಿದ್ದಾರೆ. ತೆರೆ ಮೇಲೆ ಅದು ಕಾಣುತ್ತೆ. ಚಿತ್ರದ ಮುಖ್ಯ ಹೈಲೈಟ್ ಅಂದ್ರೆ ಕಥೆ ಮತ್ತು ಶಿವರಾಜ್ ಕೆ.ಆರ್ ಪೇಟೆ ಹಾಗೂ ಸಿಂಬಾ ( ಗುಂಡ)ನ ಅದ್ಭುತ ಪರ್ಫಾರ್ಮೆನ್ಸ್. ಶಿವರಾಜ್ ಕೆ.ಆರ್ ಪೇಟೆ ಮತ್ತು ಸಿಂಬಾ ನಡುವಿನ ಬಾಂಡಿಂಗ್ ಅದ್ಭುತ ಅನ್ನಿಸುತ್ತೆ. ಹಾಸ್ಯ ಕಲಾವಿದನಾಗಿ ಈಗಾಗ್ಲೇ ಉದ್ಯಮಕ್ಕೆ ತಮ್ಮ ಪ್ರತಿಭೆಯನ್ನ ತೋರಿಸಿ ಶಹಬಾಸ್ ಎನ್ನಿಸಿಕೊಂಡಿರೋ ಶಿವರಾಜ್, ತಾವೂಬ್ಬ ಪರಿಪೂರ್ಣಕಲಾವಿದ ಅನ್ನೋದನ್ನ ಈ ಚಿತ್ರದಿಂದ ಸಾಬೀತು ಮಾಡಿದ್ದಾರೆ. ಅದ್ರಲ್ಲೂ ಸೆಕೆಂಡ್ ಹಾಫ್ ಮತ್ತು ಕ್ಲೈಮ್ಯಾಕ್ಸ್ ನಲ್ಲಿ ಶಿವರಾಜ್ ಭಾವುಕವಾಗಿ ನೋಡುಗರ ಮನಸಲ್ಲಿ ಉಳಿದು ಬಿಡ್ತಾರೆ. ಶಿವರಾಜ್ ಗೆ ಹೆಂಡತಿಯಾಗಿ ಕಾಣಿಸಿಕೊಂಡಿರೋ ಸಂಯುಕ್ತ ಹೊರನಾಡು ಅಭಿನಯ ಚೆನ್ನಾಗಿದೆ, ಜಿಜಿ ಗೋವಿಂದೇ ಗೌಡರ ಪರ್ಫಾರ್ಮೆನ್ಸ್ ಚೆನ್ನಾಗಿದೆ. ಕಿರುತೆರೆಯಲ್ಲದೇ ಬೆಳ್ಳಿತೆರೆಯಲ್ಲೂ ಶಿವರಾಜ್- ಜಿಜಿ ಜೋಡಿ ಮ್ಯಾಜಿಕ್ ಮಾಡಿದೆ.
ಶಿವರಾಜ್ ಗೆಳೆಯ ಶರತ್ ಚಕ್ರವರ್ತಿ, ಟಿವಿ9ನ ನೀವು ಹೇಳಿದ್ದು ನಾವು ಕೇಳಿದ್ದು ಗೋಪಾಲಣ್ಣ ಓತಿಕೇತಾ ಜೋಡಿ, ಈ ಸಿನಿಮಾದಲ್ಲಿ ಹಾಸ್ಯಕ್ಕಿಂತ ಭಾವುಕತೆಯಿಂದ ನೋಡುಗರ ಮನಸೂರೆಗೊಳ್ಳುತ್ತೆ. ಶಿವರಾಜ್ ಪ್ರತಿಭೆ ಗೊತ್ತಿರೋ ಶರತ್ ಚಕ್ರವರ್ತಿ ಈ ಚಿತ್ರಕ್ಕೆ ಸೊಗಡು ಭರಿತ ಹಾಸನ ಶೈಲಿಯ ಸಂಭಾಷಣೆಯನ್ನ ಬರೆದಿದ್ದು, ಡೈಲಾಗ್ಸ್ ಪಂಚಿಂಗ್ ಆಗಿವೆ. ನೆನಪಿನಲ್ಲಿ ಉಳಿಯುತ್ತವೆ. ಟೆಕ್ನಿಕಲಿ ನಾನು ಮತ್ತು ಗುಂಡ ಕ್ವಾಲಿಟಿಯಾಗಿದ್ದು, ಚಿದಾನಂದ್ ಛಾಯಾಗ್ರಹಣ ಅಚ್ಚುಕಟ್ಟಾಗಿದೆ. ಕಾರ್ತಿಕ್ ಶರ್ಮಾ ಸಂಗೀತ ಚಿತ್ರದ ಸೊಗಡಿಗೆ ಸೂಕ್ತವಾಗಿದೆ. ಹಾಡುಗಳು ಮಜವಾಗಿದ್ದು, ರೋಹಿತ್ ರಮಣ್ ಸಾಹಿತ್ಯ ಗಮನ ಸೆಳೆಯುವಂತಿದೆ. ನಿರ್ದೇಶಕರಾಗೋ ಹಂತದಲ್ಲೇ ನಿರ್ಮಾಪಕರಾಗಿರೋ ರಘು ಹಾಸನ್ ಸಿನಿಮಾ ನಿರ್ಮಾಣದ ಪ್ರೀತಿ, ಫ್ರೇಮ್ ನಲ್ಲೂ ಎದ್ದು ಕಾಣುತ್ತೆ.

ಪ್ಲಸ್
•ಶಿವರಾಜ್ ಕೆ.ಆರ್ ಪೇಟೆ ಮತ್ತು ಸಿಂಬಾ ಪರ್ಫಾರ್ಮೆನ್ಸ್
•ಮನಮುಟ್ಟುವ ನೈಜ ಕಥೆ
•ಶರತ್ ಚಕ್ರವರ್ತಿ ಸಂಭಾಷಣೆ
•ಎಮೋಷಿನಲ್ ಸೀಕ್ವೆನ್ಸ್
•ಕಾಮಿಡಿ ಟ್ರ್ಯಾಕ್
•ರಘುಹಾಸನ್ ಕ್ವಾಲಿಟಿ ನಿರ್ಮಾಣ
•ಸೊಗಡು ತುಂಬಿದ ಛಾಯಾಗ್ರಹಣ

ಮೈನಸ್
•ಸಂಕಲನ

ಫೈನಲ್ ಸ್ಟೇಟ್ಮೆಂಟ್
ನಾನು ಮತ್ತು ಗುಂಡ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳ ನಂತ್ರ, ಬಂದಿರೋ ಪೂರ್ಣಪ್ರಮಾಣದಲ್ಲಿ ಪ್ರಾಣಿಯೊಂದು ಕಾಣಿಸಿಕೊಂಡಿರುವಂತಹ ಸಿನಿಮಾ. ನೈಜತೆ ತುಂಬಿದ ತಾಜಾಕಥೆ, ಕ್ವಾಲಿಟಿ ಮೇಕಿಂಗ್, ಅದ್ಭುತ ಪರ್ಫಾರ್ಮೆನ್ಸ್ ಎಲ್ಲಾ ಆಂಗಲ್ ನಿಂದ್ಲೂ ಎಲ್ಲಾ ವರ್ಗದವರನ್ನೂ ಸೆಳೆಯುವಂತಹ ರಂಜನಿಯ ಅಂಶಗಳಿರೋ ಸಿನಿಮಾ. ಎರಡು ಗಂಟೆ ನಮ್ಮ ಊರಲ್ಲಿ, ನಮ್ಮ ನಡುವೆಯೇ ನಡೆಯುತ್ತಿರೋ ಘಟನಾವಳಿಗಳಂತೆ ಭಾಸವಾಗೋ ಈ ಭಾವನಾತ್ಮಕ ಕಥೆ ನಿಜಕ್ಕೂ ಎಂದೂ ಮರೆಯಲಾಗದಂತಹ ಕಥೆ, ಖಂಡಿತ ನಾನು ಮತ್ತು ಗುಂಡ ಸಿನಿಮಾ ನೋಡಿ ಥಿಯೇಟರಿಂದ ಆಚೆ ಬರೋ ಪ್ರೇಕ್ಷಕ ಅಂತಹದೊಂದು ಎಮೋಷನ್ನ ಹೊತ್ತು ಆಚೆ ಬರ್ತಾರೆ. ಕಾಡುವಂತಹ ಕಥೆ ನಾನು ಮತ್ತು ಗುಂಡ. ನಗುತ್ತಾ ನಗುತ್ತಾ ಅಳಿಸೋ,ರಂಜಿಸೋ ಗುಂಡನನ್ನ ಮಿಸ್ ಮಾಡ್ದೇ ನೋಡಿ. ಗ್ಯಾರೆಂಟಿ ನೀವು ಕೊಟ್ಟ ಕಾಸಿಗೆ ಮೋಸ ಆಗೋಲ್ಲ.

ಫಿಲ್ಮಿ ಸ್ಕೂಪ್ ರೇಟಿಂಗ್
3.5/5