kannada picchar pailwan

ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳ ಜೊತೆಗೆ ಪ್ರತಿ ವರ್ಷ ಸೆಪ್ಟೆಂಬರ್‌ ೧೮ರಂದು ಆಚರಿಸಿಕೊಳ್ತಾರೆ. ಅವತ್ತು ಅಭಿಮಾನಿಗಳು ದೂರದೂಗಳಿಂದ ಬಂದು ಕಿಚ್ಚನಿಗೆ ವಿಶ್‌ ಮಾಡ್ತಾರೆ. ಅಭಿಮಾನಿಗಳ ಜೊತೆಗೆ ಸಿನಿಮಾ ನಟ ನಟಿಯರು, ಸಮಾಜದ ಗಣ್ಯರು ಉಡುಗೊರೆಗಳನ್ನನೀಡ್ತಾರೆ. ಆದ್ರೆ ಕಳೆದ ಕೆಲ ವರ್ಷಗಳಿಂದ ಹುಟ್ಟುಹಬ್ಬದ ಆಚರಣೆಗೆ ಬರುವ ಅಭಿಮಾನಿಗಳು ಕೇಕ್‌, ಹೂಗುಚ್ಚಗಳನ್ನ ತರಬೇಡಿ ಅಂತ ಖುದ್ದು ಸುದೀಪ್‌ ಮನವಿ ಮಾಡ್ತಾರೆ. ಫ್ಯಾನ್ಸ್‌ ಕೂಡ ಕಿಚ್ಚನ ಮಾತು ಕೇಳ್ತಾರೆ. ಆದ್ರೆ ಈ ಬಾರಿ ಕಿಚ್ಚನಿಗೆ ಒಂದು ವಿಶೇಷ ಬಹುಮಾನ ಸಿಗ್ತಾ ಇದೆ.

ಕಿಚ್ಚನ ಬರ್ತ್‌ಡೇಗೆ ರಿಲೀಸ್‌ ಆಗ್ತಾ ಇರೋ ಮೊಟ್ಟಮೊದಲ ಸಿನಿಮಾ 

ಕಿಚ್ಚ ಸುದೀಪ್‌ ಕನ್ನಡ ಸೇರಿದಂತೆ ತೆಲುಗು ತಮಿಳು ಹಿಂದಿ ಸೇರಿದಂತೆ ಸಾಕಷ್ಟು ಭಾಷೆಗಳಲ್ಲಿ ಸುಮಾರು 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದ್ರೆ ಕಿಚ್ಚ ನಟಿಸಿರೋ ಒಂದೇ ಒಂದು ಸಿನಿಮಾ ಕೂಡ ಇಲ್ಲಿಯವರೆಗೂ ಅವ್ರ ಬರ್ತ್‌ಡೇಗೆ ರಿಲೀಸ್‌ ಆಗಿಲ್ಲ. ಈ ವರ್ಷ ಅವ್ರ ಬರ್ತ್‌ಡೇ ಯಾಗಿ ಜಸ್ಟ್‌ 10 ದಿನಕ್ಕೆ, ಪೈಲ್ವಾನ್‌ ಸಿನಿಮಾ ರಿಲೀಸ್‌ ಆಗ್ತಾ ಇದೆ. 5 ಭಾಷೆಗಳಲ್ಲಿ ನಟಿಸಿರೋ ಸಿನಿಮಾ ಪೈಲ್ವಾನ್‌. ಸುದೀಪ್‌ ಬರ್ತ್‌ಡೇ ಮುಗಿದು ಹತ್ತೇ ದಿನಕ್ಕೆ ಪೈಲ್ವಾನ್‌ ತೆರೆಗೆ ಬರ್ತಾ ಇರೋದು ಅವ್ರ ಅಭಿಮಾನಿಗಳಿಗೆ ಹರ್ಷ ದುಪ್ಪಟ್ಟು ಮಾಡಿದೆ.