ಕೆಜಿಎಫ್​.. ಕನ್ನಡ ಇಂಡಸ್ಟ್ರಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿ ಕೊಟ್ಟ ಸಿನಿಮಾ. ಇವತ್ತಿಗೆ ‘ರಾಕಿ ಭಾಯ್​’ ಜನರೆದುರಿಗೆ ಬಂದು ವರ್ಷವಾಯ್ತು. ಈ ಸಂಭ್ರಮದ ನಡುವಲ್ಲೇ ಚಿತ್ರತಂಡ ಕೆಜಿಎಫ್​ ಚಾಪ್ಟರ್​- 2 ಫಸ್ಟ್​ ಲುಕ್ ಪೋಸ್ಟರ್​ ಬಿಡುಗಡೆಗೆ ಮುಂದಾಗಿತ್ತು. ಇದೀಗ ಆ ಕ್ಷಣ ಬಂದಿದೆ. ರಾಕಿ ಭಾಯ್​ ಅವತಾರ ಫ್ಯಾನ್ಸ್​​ಗಳಲ್ಲಿ ಅಭಿಮಾನದ ಕಿಚ್ಚು ಹಚ್ಚಿಸಿದೆ.


ಇಂಡಸ್ಟ್ರಿ ಆಚೆಗೂ ಪೋಸ್ಟರ್​​ ಕಾಂಪಿಟೇಷನ್​..!
ಈ ಪೋಸ್ಟರ್​ ಮೂಲಕ ಮುಂದಿನ ಕಥೆಯ ಎಳೆಯನ್ನು ಟೀಂ​ ಬಿಚ್ಚಿಟ್ಟಿದೆ. ರಾಕಿ.. ರಾಕಿ ಭಾಯ್​ ಆದ ನಂತರ ನರಾಚಿ ಸಾಮ್ರಾಜ್ಯವನ್ನು ಹೇಗೆ ಎತ್ತಿ ನಿಲ್ಲಿಸ್ತಾರೆ..? ಅನ್ನೋದರ ಸೂಚಕವಾಗಿದೆ. ರಾಕಿ ಭಾಯ್​ ಲುಕ್​ ಪೊಗರದಸ್ತ್​ ಆಗಿದೆ. ಈಗಾಗಲೇ ಎಲ್ಲೆಡೆಯಿಂದ ಪೋಸ್ಟರ್​ ಬಗ್ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ.