ಇದೇ ಡಿ 21ಕ್ಕೆ ಕೆ.ಜಿ.ಎಫ್ ಸಿನಿಮಾ ರಿಲೀಸ್ ಆಗಿ ವರ್ಷವಾಗ್ತಿದೆ. ಈ ವರ್ಷದಲ್ಲಿ ರಾಕಿಂಗ್ ಸ್ಟಾರ್ ಯಶ್ ಕೆ.ಜಿ.ಎಫ್ ಒಂದರಿಂದ ಉದ್ಯಮದಲ್ಲಾದ ಬದಲಾವಣೆ ಹತ್ತು ಹಲವು.

ಇತಿಹಾಸ ಸೃಷ್ಟಿಸಿದ ಕೆ.ಜಿ.ಎಫ್ ಗೂ ಮುನ್ನ ಚಿತ್ರರಂಗ…!!!!
• ಕನ್ನಡ ಚಿತ್ರೋದ್ಯಮಕ್ಕೆ ಸೀಮಿತ ಮಾರುಕಟ್ಟೆಯ ಹಣೆಪಟ್ಟಿ
• ನಿರ್ಮಾಪಕರಿಂದ ಸೀಮಿತ ಬಜೆಟ್ ನಲ್ಲೇ ಚಿತ್ರ ನಿರ್ಮಾಣ
• ನಿಪುಣ ತಂತ್ರಜ್ಞರು, ಫಿಲಂ ಮೇಕರ್ ಗಳು ಕನ್ನಡದಲ್ಲೇ ಇದ್ರು ಜಗತ್ತಿಗೆ ಗೊತ್ತಿರಲಿಲ್ಲ.
• ಕನ್ನಡ ಸಿನಿಮಾ ತಂತ್ರಜ್ಞರ ತಾಕತ್ ಪರಿಚಯವಾಗಿರಲಿಲ್ಲ.
• ಪರಭಾಷಾ ಸ್ಟಾರ್ ಗಳಿಗೆ ಕನ್ನಡ ಸಿನಿಮಾ ಅಂದ್ರೆ ಅಸಡ್ಡೆ
• ಪರಭಾಷಾ ಸಿನಿಪ್ರಿಯರಿಗೆ ಕನ್ನಡ ಚಿತ್ರಗಳೆಂದರೆ ಅಷ್ಟಕಷ್ಟೆ
• ಹೊರಗಿನ ಮಾಧ್ಯಮಗಳಲ್ಲಿ ಇರಲಿಲ್ಲ ಕನ್ನಡ ಸಿನಿಮಾ ಸುದ್ದಿಗೆ ಸ್ಥಾನ
• ಕರ್ನಾಟಕದ ಮಾರುಕಟ್ಟೆಯನ್ನಾವರಿಸಿದ್ದ ಪರಭಾಷಾ ಸಿನಿಮಾಗಳು
• ಕರ್ನಾಟಕದ ಗಡಿದಾಟಿರಲಿಲ್ಲ ಕನ್ನಡ ಚಿತ್ರಾಭಿಮಾನಿಗಳು

ಕೆ.ಜಿ.ಎಫ್ ಇತಿಹಾಸ ಸೃಷ್ಟಿಸಿದ ಮೇಲೆ ಕನ್ನಡ ಚಿತ್ರರಂಗ..!!!
• ಪ್ಯಾನ್ ಇಂಡಿಯಾ ಚಿತ್ರಗಳ ನಿರ್ಮಾಣದತ್ತ ಮುಂದಾದ ನಿರ್ಮಾಪಕರು
• ಕನ್ನಡ ಸಿನಿಮಾಗಳ ಮೇಲೆ ಬಂಡವಾಳ ಹೂಡಲು ಬಂದ ಹೊರಗಿನ ನಿರ್ಮಾಪಕರು
• ವಿಶ್ವದಾದ್ಯಂತ ವಿಸ್ತಾರವಾಯ್ತು ಕನ್ನಡ ಚಿತ್ರರಂಗದ ಮಾರುಕಟ್ಟೆ
• ಕರ್ನಾಟಕದಲ್ಲೀಗ ಕನ್ನಡ ಸಿನಿಮಾನೇ ಸಾರ್ವಭೌಮತ್ವ- ಪಾರುಪತ್ಯ
• ಕನ್ನಡ ಸಿನಿಮಾ ತಂತ್ರಜ್ಞನರಿಗೆ ತಾಕತ್ತು ಜಗತ್ತಿಗೆ ಗೊತ್ತಾಯ್ತು.
• ಪರಭಾಷೆಗಳಿಂದ ಕನ್ನಡ ಸಿನಿಮಾ ತಂತ್ರಜ್ಞರಿಗೆ ಬುಲಾವ್
• ಹೆಚ್ಚಾಯ್ತು ಕನ್ನಡ ತಂತ್ರಜ್ಞರಿಗೆ ಬೇಡಿಕೆ
• ಕರ್ನಾಟಕದಲ್ಲಿ ನೆಲಕುರುಳಿತು ಪರಭಾಷಾ ಸಿನಿಮಾಗಳ ಮಾರುಕಟ್ಟೆ
• ಕನ್ನಡ ಚಿತ್ರಗಳ ಬಗ್ಗೆ ಮಾತನಾಡಲು ಆರಂಭಿಸಿದ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸ್ಟಾರ್ಸ್
• ಕನ್ನಡ ಸಿನಿಮಾಗಳತ್ತ ಒಲವು ತೋರಿಸಲು ಮುಂದಾದ ಪರಭಾಷಾ ಸಿನಿಪ್ರಿಯರು
• ಕನ್ನಡ ಭಾಷೆಯಲ್ಲಿ ಡಬ್ಬಿಂಗ್ ಮಾಡಲು ಮುಂದಾದ್ರು ಪರಭಾಷಾ ದೊಡ್ಡ ಸ್ಟಾರ್ಸ್
• ಹೊರ ರಾಜ್ಯದ ಮಾಧ್ಯಮಗಳಲ್ಲಿ ಕನ್ನಡ ಸಿನಿಮಾ ಸುದ್ದಿ-ಚರ್ಚೆಗೆ ಆದ್ಯತೆ
• ಗಡಿದಾಟಿ ಸಾಗರದಾಟಿ ಹುಟ್ಟಿಕೊಂಡಿದ್ದಾರೆ ಕನ್ನಡ ಚಿತ್ರಾಭಿಮಾನಿಗಳು

-ಚಿತ್ರಪ್ರೇಮಿ