ಬಹುನಿರೀಕ್ಷೆಯ ಸಿನಿಮಾ ಕೋಬ್ರಾ ಸಿನಿಮಾದ ಮೊದಲ ಪೋಸ್ಟರ್ ರಿಲೀಸ್ ಆಗಿದ್ದು, ಪೋಸ್ಟರ್ ನೋಡಿದ ಸಿನಿಪ್ರಿಯರು ಪುಲ್ ಫಿದಾ ಆಗಿದ್ದಾರೆ.

ಹೌದು, ಸೆವೆನ್ ಸ್ಕ್ರೀನ್ ಸ್ಟೋಡಿಯೋಸ್ ನಲ್ಲಿ ತಮ್ಮ ಟ್ವೀಟರ್ ಖಾತೆಯಲ್ಲಿ ರಿಲೀಸ್ ಮಾಡಿದ್ದು, ಈ ಪೋಸ್ಟರ್ ನಲ್ಲಿ ವಿಕ್ರಂ ಏಳು ಗೆಟಪ್ ಗಳಲ್ಲಿ ಮಿಂಚಿದ್ದಾರೆ. ಇದರೊಂದಿಗೆ ಕೋಬ್ರಾ ಚಿತ್ರದ ಕುರಿತಾಗಿ ಚಿಯಾನ್ ಅಭಿಮಾನಿಗಳು ಸೇರಿದಂತೆ ಚಿತ್ರರಸಿಕರ ಕುತೂಹಲ ಇನ್ನು ಹೆಚ್ಚಾಗಿದೆ.

ಇನ್ನು, ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದ ಕೋಬ್ರಾ ಸಿನಿಮಾದ ಪೋಸ್ಟರ್ ರಿಲೀಸ್ ಅನ್ನು #CobraFirstLook ಎಂದು ಹ್ಯಾಷ್ ಟ್ಯಾಗ್ ರಚಿಸಿ ತನ್ನ ಅಧಿಕೃತ ಟ್ವಿಟರ್ ನಲ್ಲಿ
ಸೆವೆನ್ ಸ್ಕ್ರೀನ್ ಸ್ಟೋಡಿಯೋ ಈ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ದೊಡ್ಡದಾದ ಕನ್ನಡಿಯೊಂದರ ಮುಂದೆ ಬೆನ್ನು ಹಾಕಿ ನಿಂತಿರುವ ವಿಕ್ರಂ ಅವರ ಎರಡೂ ಬದಿಯಲ್ಲಿ ನಮಗೆ ಮುಖ ಮಾಡಿ ನಿಂತಿರುವಂತೆ ಉಳಿದ ಆರು ಪಾತ್ರಗಳು ಕಾಣಿಸುತ್ತವೆ. ಅದರಲ್ಲಿ ಓರ್ವ ಶ್ರೀಮಂತ, ಸಾಮಾನ್ಯ ಶ್ರೀಮಂತ, ಪ್ರಾಯದ ವ್ಯಕ್ತಿ, ಕಡುಕಪ್ಪು ಬಣ್ಣದ ವ್ಯಕ್ತಿ ಹಾಗೂ ಬೇರೆ ಬೇರೆ ವರ್ಗಕ್ಕೆ ಸೇರಿರುವ ಮೂವರು ವ್ಯಕ್ತಿಗಳ ಸಹಿತ ಒಬ್ಬನೇ ನಟನ ಒಟ್ಟು ಏಳು ಪಾತ್ರಗಳು ಈ ಪೋಸ್ಟರ್ ನಲ್ಲಿ ಪ್ರತಿಬಿಂಬಿತವಾಗಿವೆ.

ಅಜಯ್ ಜ್ಞಾನಮುತ್ತು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಕ್ರಿಕೆಟಿನ ಇರ್ಫಾನ್ ಪಠಾಣ್ ಅವರು ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿಕೊಟ್ಟಿದ್ದಾರೆ.

ಇನ್ನು ಕೆ.ಜಿ.ಎಫ್. ನಾಯಕಿ ಶ್ರೀನಿಧಿ ಶೆಟ್ಟಿ ಅವರು ವಿಕ್ರಂ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಒಟ್ಟು ಮೂರು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಚಿತ್ರ ಮೇ ತಿಂಗಳಿನಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.