ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಇತ್ತಿಚೆಗೆ ಮಾಡಿದ ಟ್ವೀಟ್‌ ನೋಡಿ, ಇದು ಯಾರಿಗೆ ಕೊಡ್ತಾ ಇರೋ ಕೌಂಟರ್‌, ಸುದೀಪ್‌ ಅವರಿಗಾ? ಅಥವ ಬೇರೆ ಯಾರಾದ್ರೂ ಸ್ಟಾರ್‌ ಗಾ ಅಂತ ಇಲ್ಲ ಸಲ್ಲದ ಗಾಸಿಪ್‌ ಹರಿದಾಡ್ತಾ ಇದೆ, ಆದ್ರೆ ದರ್ಶನ್‌ ಹೀಗೆ ಟ್ವೀಟ್‌ ಅಥವ ಕಮೆಂಟ್‌ ಮಾಡ್ತಾ ಇರೋದು ಇದೇ ಮೊದಲೇನಲ್ಲ. ಆದ್ರೆ ದರ್ಶನ್‌ ಪ್ರತಿ ಬಾರಿ ಹೇಳ್ತಾ ಇರೋದು ಒಂದೇ ಮಾತು. ನಾನು ಯಾರ ತಂಟೆಗೂ ಹೋಗೋದಿಲ್ಲ, ನನ್ನ ತಂಟೆಗೆ ಅನಾವಶ್ಯಕವಾಗಿ ಬರೋ ಯಾರನ್ನೂ ಸುಮ್ಮನೇ ಬಿಡೋದಿಲ್ಲ ಅಂತ. ಈ ಬಾರಿಯೂ ದರ್ಶನ್‌ ಹೇಳಿರೋದು ಅದನ್ನೆ. ದರ್ಶನ್‌ ಇದನ್ನ ಪದೇ ಪದೇ ಹೇಳ್ತಿದ್ದಾರೆ ಅಂದ್ರೆ ಅದಕ್ಕೆ ಕಾರಣ ಇಲ್ಲದಿಲ್ಲ. ಹಾಗಾದ್ರೆ ದರ್ಶನ್‌ಗೆ ಇಷ್ಟೊಂದು ಟಾರ್ಚರ್‌ ಕೊಡ್ತಾ ಇರೋರು ಯಾರು ಅನ್ನೋದೆ ಈಗಿರೋ ಪ್ರಶ್ನೆ..!

ಇನ್ನಷ್ಟು ಖಡಕ್ಕಾಗಿ ಹೇಳಿದ್ದಾರೆ ದರ್ಶನ್‌ ಅಷ್ಟೆ.!

ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ‘ನಾನು ಐಸ್‍ಕ್ಯಾಂಡಿಯಷ್ಟು ಸಿಹಿ. ನೀರಿನಷ್ಟು ತಂಪು, ಕೆಟ್ಟತನದಲ್ಲಿ ನರಕ ತೋರಿಸುತ್ತೇನೆ. ಪ್ರಾಮಾಣಿಕತೆಯಲ್ಲಿ ಯೋಧನಷ್ಟು ನಿಷ್ಠ. ಎದುರಿಗೆ ಇದ್ದವರು ಹೇಗಿರುತ್ತಾರೊ, ನಾನೂ ಹಾಗೇ ಇರುತ್ತೇನೆ ಎಂದು ಬರೆದುಕೊಂಡಿರೋದಷ್ಟೆ. ಆದ್ರೆ ಈ ಬಾರಿ ಅವ್ರ ಮಾತಿನಲ್ಲಿ ಇನ್ನೊಂದಿಷ್ಟು ಕಟುವಾದ ಮಾತುಗಳಿವೆ. ದರ್ಶನ್‌ ಏನೇ ಮಾಡಿದ್ರು ಸುದ್ದಿ ಅನ್ನೋರು. ಇದನ್ನ ತಮ್ಮ ಸುದ್ದಿಯ ಚಪಲಕ್ಕೆ ಬಳಸಿಕೊಳ್ತಾ ಇದ್ದಾರೆ ಅನ್ನೋದಷ್ಟೆ ವಿಪರ್ಯಾಸದ ಸಂಗತಿ..!