ರಾಬರ್ಟ್ ಸಿನಿಮಾದಲ್ಲಿ ಆಂಜನೇಯನ ವೇಷ ತೊಟ್ಟ ದರ್ಶನ್.ಆಂಜನೇಯನ ವೇಷತೊಡ ಬೇಕಾದ್ದರಿಂದ ದರ್ಶನ್ ಮಾಂಸಹಾರ ತ್ಯಜಿಸಿದ್ದರು.ಸುಮಾರು 8 ದಿನಗಳ ಕಾಲ ಸೆಟ್ನಲ್ಲಿ ದರ್ಶನ್ ಮಾಂಸಹಾರ ಮಾಡಿರಲಿಲ್ಲ.ಜೊತೆಗೆ ಸೆಟ್ ಹುಡುಗರಿಗೂ ಮಾಂಸಹಾರ ಮಾಡದಂತೆ ಸೂಚಿಸಿದ್ದರು. ಅಕಸ್ಮಾತ್ ಮಾಂಸಾಹಾರ ಮಾಡುವಂತಿದ್ದರೆ ಸೆಟ್ನಿಂದ ದೂರ ಹೋಗಿ ಮಾಡುವಂತೆ ತಿಳಿಸಿದ್ದರು.

ಆಂಜನೇಯನ ಅವತಾರದಲ್ಲಿ ದರ್ಶನ್ ಕಾಣಿಸುವ ಸನ್ನಿವೇಶಗಳು ಸಿನಿಮಾದ ಮೇಜರ್ ಹೈಲೈಟ್ ಆಗಿದೆ. ಈ ಅವತಾರದಲ್ಲಿ ದರ್ಶನ್ ಹೆಚ್ಚು ಹೊತ್ತು ಕಾಣಿಸಿಕೊಳ್ತಾರೆ.ಅಲ್ಲದೇ ಸೆಟ್ನಲ್ಲಿ ಬೃಹತ್ ರಾಮ ಮತ್ತು ಆಂಜನೇಯನ ಕಟೌಟ್ ನಿಲ್ಲಿಸಲಾಗಿತ್ತು.ಸುಮಾರು 6 ಸಾವಿರ ಜೂನಿಯರ್ ಆರ್ಟಿಸ್ಟ್ ಈ ದೃಶ್ಯದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು .ಇನ್ನೂ ಒಂದು ಹಾಡಿನ ಚಿತ್ರೀಕರಣ ಮುಗಿದರೇ ರಾಬರ್ಟ್‌ ಶೂಟಿಂಗ್ ಕಂಪ್ಲೀಟ್ ಆಗಲಿದೆ.ಏಪ್ರಿಲ್‌ನಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ