ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ಭರಾಟೆ ಸಿನಿಮಾ ಇದೇ ಸೆಪ್ಟೆಂಬರ್‌ 27 ರಂದು ರಿಲೀಸ್ ಆಗಬೇಕಿತ್ತು. ಆದ್ರೆ ಸಿನಿಮಾ ರಿಲೀಸ್‌ ಡೇಟ್‌ ಅನ್ನು ಬರೋಬ್ಬರಿ ೩ ವಾರಗಳ ಕಾಲ ಮುಂದೂಡಿದೆ. ಸೆಪ್ಟೆಂಬರ್‌ 27ಕ್ಕೆ ಬದಲಾಗಿ ಅಕ್ಟೋಬರ್‌ 18 ರಂದು ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾ ಟೀಮ್‌ ಈ ನಿರ್ಧಾರ ಕೈಗೊಳ್ಳೊಕೆ ಕಾರಣ ತೆಲುಗಿನ ಸೈರಾ ನರಸಿಂಹ ರೆಡ್ಡಿ ಸಿನಿಮಾ.. ಹೌದು ಮೆಗಾಸ್ಟಾರ್‌ ಚಿರಂಜೀವಿ ಹಾಗೂ ಕಿಚ್ಚ ಸುದೀಪ್‌ ಅಭಿನಯದ ಸೈರಾ ಸಿನಿಮಾ ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ತೆಲುಗು, ಕನ್ನಡ ಸೇರಿದಂತೆ ೫ ಭಾಷೆಗಳಲ್ಲಿ ರಿಲೀಸ್‌ ಆಗ್ತಾ ಇದ್ದು, ಈ ಸಿನಿಮಾಗಾಗಿ ತಮ್ಮ ಭರಾಟೆ ಸಿನಿಮಾದ ರಿಲೀಸ್‌ ಡೇಟ್‌ ಫೋಸ್ಟ್‌ ಪೋನ್‌ ಮಾಡಿದೆ.

ಹಾಡು, ಟೀಸರ್‌ನಿಂದ ಹೈಪ್‌ ಕ್ರಿಯೇಟ್‌ ಮಾಡಿರೋ ಚಿತ್ರ..!

ಈಗಾಗಲೇ ಸಿನಿಮಾದ ಟೀಸರ್‌, ರಿಲೀಸ್‌ ಆಗಿರೋ ಒಂದು ಸಾಂಗ್‌ ಸಾಕಷ್ಟು ಹೈಪ್‌ ಕ್ರಿಯೇಟ್‌ ಮಾಡಿದೆ. ಬಹದ್ದೂರ್‌, ಭರ್ಜರಿಯಂಥಾ ೨ ಬ್ಲಾಕ್‌ ಬಸ್ಟರ್‌ ಸಿನಿಮಾಗಳನ್ನ ಡೈರೆಕ್ಟ್‌ ಮಾಡಿದ್ದ ಚೇತನ್‌ ಕುಮಾರ್‌ ನಿರ್ದೇಶನದ ಸಿನಿಮಾ ಅನ್ನೋ ಕಾರಣಕ್ಕೆ ಸಿನಿಮಾಕ್ಕೆ ತುಂಬಾನೇ ಹೈಪ್‌ ಇತ್ತು, ಆದ್ರೆ ಈಗ ಶ್ರೀಮುರುಳಿ ಹಾಗೂ ಶ್ರೀಲೀಲಾ ಅಭಿನಯದ ಬಹುನಿರೀಕ್ಷಿತ ಭರಾಟೆ ಸಿನಿಮಾ ಅಕ್ಟೋಬರ್‌ 18ಕ್ಕೆ ರಿಲೀಸ್‌ ಆಗ್ತಾ ಇದೆ. ಲೇಟ್‌ ಆದ್ರೂ ಸಿನಿಮಾ ಲೇಟೆಸ್ಟ್‌ ಆಗಿ ಬರುತ್ತೆ ಅನ್ನೋದು ಸಿನಿಮಾ ಟೀಮ್‌ನ ವಿಶ್ವಾಸ.