ಇಂದಿನಿಂದ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಪ್ರಾರಂಭವಾಗುತ್ತಿದ್ದು, ಇಂದು ಸಂಚೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ನಾಳೆಯಿಂದ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.

ಹೌದು, ಇಂದು ಕಾರ್ಯಕ್ರಮದ ಉದ್ಘಾಟನೆಯಲ್ಲಿ, ನಟ ಯಶ್, ಬಾಲಿವುಡ್ ಬೋನಿ ಕಪೂರ್, ಹಾಗೂ ಗಾಯಕ ಸೋನು ನಿಗಮ್ ಭಾಗಿಯಾಗಲಿದ್ದಾರೆ. ಇನ್ನು ಒರಾಯನ್ ಮಾಲ್, ನವರಂಗ್ ಚಿತ್ರಮಂದಿರ, ಕಲಾವಿದರ ಸಂಘ ಹಾಗೂ ಸುಚಿತ್ರದಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ. ಶಂಕರ್ ನಾಗ್ ನಿರ್ದೇಶನದ ‘ಮಿಂಚಿನ ಓಟ’ ಸಿನಿಮಾ ಜ್ಯೂರಿಗಳಿಗಾಗಿ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ. ತೆಲುಗಿನ ‘ಶಂಕರಾಭರಣ’ ಹಾಗೂ ರಷ್ಯಾದ ‘Ivan’s Childhood’ ಸಹ ಜ್ಯೂರಿಗಾಗಿ ಆಯೋಜಿಸಿದ ಚಿತ್ರಗಳಾಗಿವೆ.

ಇನ್ನು ಮೊದಲ ದಿನ ಪ್ರದರ್ಶನ ಆಗುವ ಕನ್ನಡ ಸಿನಿಮಾಗಳು ಮಿಂಚಿನ ಓಟ (ಒರಾಯನ್ ಮಾಲ್), ಒಂದು ಶಿಕಾರಿಯ ಕಥೆ (ನವರಂಗ್), ಭಿನ್ನ (ಒರಾಯನ್ ಮಾಲ್), ಅಬ್ಯಂಜನ (ಒರಾಯನ್ ಮಾಲ್), ನಟ ಸಾರ್ವಭೌಮ (ಒರಾಯನ್ ಮಾಲ್), ಕಾಳಿದಾಸ ಕನ್ನಡ ಮೇಷ್ಟ್ರು (ಒರಾಯನ್ ಮಾಲ್), ಐ ಲವ್ ಯೂ (ಕಲಾವಿದರ ಸಂಘ), ಸುಗಂಧಿ (ನವರಂಗ್), ಸವರ್ಣದೀರ್ಘ ಸಂಧಿ (ನವರಂಗ್), ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ 3, ಬನಶಂಕರಿಯ ಸುಚಿತ್ರದಲ್ಲಿ 3, ಡಾ ರಾಜ್ ಕುಮಾರ್ ರಸ್ತೆಯಲ್ಲಿರುವ ನವರಂಗ್ ಚಿತ್ರಮಂದಿರದಲ್ಲಿ 4 ಸಿನಿಮಾಗಳು ಗುರುವಾರ ಪ್ರದರ್ಶನ ಆಗಲಿದೆ.