ರಾಬರ್ಟ್ ಸಿನಿಮಾದ ರಾಬರ್ಟ್ ಸಿನಿಮಾದ ಟೀಸರ್ ಬಿಡುಗಡೆಯಾದ ನಂತರ ಆಡಿಯೋ ರಿಲೀಸ್ ಮಾಡುವುದಾಗಿ ಹೇಳಿತ್ತು ಚಿತ್ರತಂಡ. ಇದೀಗ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಲಘು ಹೃದಯಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಆಡಿಯೋ ರಿಲೀಸ್ ದಿನಾಂಕವನ್ನ ಮುಂದುಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ವು, ಅದಕ್ಕೀಗ ಸ್ಪಷ್ಟನೆ ಕೊಟ್ಟಿದ್ದಾರೆ ನಿರ್ದೇಶಕ ತರುಣ್ ಸುದೀರ್..

ಹೌದು, ಅರ್ಜುನ್ ಜನ್ಯ ಅನಾರೋಗ್ಯದಿಂದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ‘ರಾಬರ್ಟ್’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಮುಂದಕ್ಕೆ ಹೋಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ವದಂತಿ ಕುರಿತು ‘ರಾಬರ್ಟ್’ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಸ್ಪಷ್ಟನೆ ಕೊಟ್ಟಿದ್ದಾರೆ. ಮೈಸೂರಿಗೆ ಹೋಗಿ ಅರ್ಜುನ್ ಜನ್ಯ ಆರೋಗ್ಯ ವಿಚಾರಿಸಿ ಬಂದಿರುವ ತರುಣ್ ಸುಧೀರ್, ”ಅರ್ಜುನ್ ಜನ್ಯ ಈಗ ಆರೋಗ್ಯವಾಗಿದ್ದಾರೆ. ಏನೂ ಪ್ರಾಬ್ಲಂ ಇಲ್ಲ. ಇದರಿಂದ ‘ರಾಬರ್ಟ್’ ಚಿತ್ರದ ಆಡಿಯೋ ರಿಲೀಸ್ ಗೆ ಯಾವುದೇ ತೊಂದರೆ ಆಗಲ್ಲ. ನಾವಿನ್ನೂ ‘ರಾಬರ್ಟ್’ ಆಡಿಯೋ ಲಾಂಚ್ ಡೇಟ್ ಫಿಕ್ಸ್ ಮಾಡಿಲ್ಲ. ಸದ್ಯದಲ್ಲೇ ಡೇಟ್ ಅನೌನ್ಸ್ ಮಾಡ್ತೀವಿ” ಅಂತ ಹೇಳಿದ್ದಾರೆ.

‘ರಾಬರ್ಟ್’ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ”ರಾಬರ್ಟ್’ ಚಿತ್ರದ ಕೆಲಸಗಳು ಮುಗಿದಿವೆ. ಅರ್ಜುನ್ ಜನ್ಯ ತುಂಬಾ ಬೇಗ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಅರ್ಜುನ್ ಜನ್ಯ ಅವರ ಆರೋಗ್ಯ ನೋಡಿಕೊಂಡು ಆಡಿಯೋ ಲಾಂಚ್ ಡೇಟ್ ಫಿಕ್ಸ್ ಮಾಡ್ತೀವಿ” ಎಂದಿದ್ದಾರೆ.