ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು,ಇದೀಗ ತಾವು ಪ್ರೀತಿಸಿದ ಹುಡುಗ ಲೆಜೆಂಡರಿ ನಿರ್ದೇಶಕರ ರಾಘವೇಂದ್ರ ರಾವ್ ಅವರ ಪುತ್ರ ಪ್ರಕಾಶ್ ಕೋವೆಲಮುಡಿ ಅವರೊಂದಿಗೆ ಮದುವೆಯಾಗಲಿದ್ದಾರೆ.

ಹೌದು, ಅನುಷ್ಕಾ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿರುವ ಆ ಹುಡುಗ ಮತ್ಯಾರು ಅಲ್ಲ ಲೆಜೆಂಡರಿ ನಿರ್ದೇಶಕರ ರಾಘವೇಂದ್ರ ರಾವ್ ಅವರ ಪುತ್ರ ಪ್ರಕಾಶ್ ಕೋವೆಲಮುಡಿ ಎಂದು ಹೇಳಾಗುತ್ತಿದೆ. ಇಬ್ಬರು ಕೂಡ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಪ್ರಕಾಶ್ 2014ರಲ್ಲಿ ಕನ್ನಿಕಾ ಧಿಲ್ಲಾನ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ 2017ರಲ್ಲಿ ಪತ್ನಿಯಿಂದ ದೂರ ಆಗಿ ವಿಚ್ಛೇದನ ಪಡೆದಿದ್ದಾರೆ. ನಂತರ ಅನುಷ್ಕಾ ಜೊತೆ ಪ್ರೀತಿಯಲ್ಲಿ ಇದ್ದಾರೆ ಎಂದು ಹೇಳಾಗುತ್ತಿದೆ. ಪ್ರಕಾಶ್ ಕೊವೆಲಮುಡಿ ಸಹ ನಿರ್ದೇಶಕರು.

ಇನ್ನು ಪ್ರಕಾಶ್ ಪತ್ನಿಯಿಂದ ದೂರ ಆಗಿ ವಿಚ್ಛೇದನದ ಪಡೆದ ನಂತರ ಅನುಷ್ಕಾ ಶೆಟ್ಟಿಯನ್ನು ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದು, ಯಾರಿಗೂ ಗೊತ್ತಾಗದ ಹಾಗೆ ನೋಡಿಕೊಂಡು ಬಂದಿದ್ದಾರಂತೆ. ಈ ಬಗ್ಗೆ ಅನುಷ್ಕಾ ಆಪ್ತ ಮೂಲಗಳನ್ನು ವಿಚಾರಿಸಿದರೆ ಯಾವುದೆ ಮಾಹಿತಿ ಬಿಟ್ಟುಕೊಡುತ್ತಿಲ್ಲ ಎಂದು ತೆಲುಗಿನ ಅನೇಕ ವೆಬ್ ಸೈಟ್ ಗಳು ವರದಿ ಮಾಡಿವೆ.

ಇನ್ನು ಅನುಷ್ಕಾ ಮತ್ತು ಪ್ರಕಾಶ್ ಮದುವೆ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಈ ಬಗ್ಗೆ ಅನುಷ್ಕಾ ಆಗಲಿ ಅಥವಾ ಪ್ರಕಾಶ್ ಕುಟುಂಬವಾಗಲಿ ಯಾವುದು ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚಿಗೆ ಕ್ರಿಕೆಟರ್ ಮದುವೆ ಆಗುತ್ತಾರೆ ಎನ್ನುವ ಗಾಳಿ ಸುದ್ದಿ ಹಬ್ಬಿದ ಹಾಗೆ ಇದು ಕೂಡ ಗಾಳಿ ಸುದ್ದಿಯ ಅಥವಾ ನಿಜಕ್ಕು ಅನುಷ್ಕಾ ಹಸೆಮಣೆ ಏರಲು ಸಜ್ಜಾಗಿದ್ದಾರಾ ಎನ್ನುವುದು ಕಾದುನೋಡಬೇಕು.