ಈ ವರ್ಷದ ಬಹುನಿರೀಕ್ಷೆಯ ಸಿನಿಮಾ ಆಗಿರುವ ರಾಬರ್ಟ್ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಯಾವುದೇ ಅಪ್ಡೇಟ್ ಬಂದರು ಅದಕ್ಕೆ ಅಭಿಮಾನಿಗಳು ತಕ್ಷಣ ರಿಯಾಕ್ಟ್ ಮಾಡುತ್ತಿದ್ದಾರೆ. ಪ್ರತಿಯೊಂದು ಪೋಸ್ಟರ್ ಬಂದಾಗಲೂ ಕ್ರೇಜ್ ಹೆಚ್ಚುತ್ತಾ ಹೋಗುತ್ತಿದೆ. ಈ ಸಿನಿಮಾಗೆ ಡಿ ಬಾಸ್ ಅಭಿಮಾನಿಗಳು ಬೇರೆಯದೇ ರೀತಿಯ ಕನಸು ಆಸೆಗಳನ್ನು ಕಟ್ಟಿಕೊಂಡಿದ್ದಾರೆ.

ಅಭಿಮಾನಿಗಳಿಗೋಸ್ಕರ ರಾಬರ್ಟ್ ಚಿತ್ರದಿಂದ ನಾಳೆ 5 ಗಂಟೆಗೆ ವಿಶೇಷ ಮಾಹಿತಿಯೊಂದನ್ನು ನೀಡಲಾಗುತ್ತಿದೆ. ಆ ವಿಚಾರವು ತರುಣ್ ಸುಧೀರ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಈ ವಿಚಾರವೂ ಈಗ ಎಲ್ಲೆಡೆ ಬಿಸಿಬಿಸಿ ಸುದ್ದಿಯಂತೆ ಹರಡುತ್ತಿದೆ. ಏನಿರಬಹುದು ಆ ವಿಚಾರವು ಎಂಬುವುದು ಕುತೂಹಲದಿಂದ ಕೂಡಿದೆ.