ಕಾಲವೇ ಮೋಸಗಾರ… ಹೊಚ್ಚ ಹೊಸ ಪ್ರತಿಭೆಗಳೆಲ್ಲಾ ಕೂಡಿ, ಹೊಸ ಟ್ರೆಂಡ್ ಸೃಷ್ಟಿಸಲು ಮಾಡಿರೋ ಅಪ್ಪಟ ಕಮರ್ಷಿಯಲ್ ಪ್ರಯೋಗ… ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂನಲ್ಲಿ ಏಕಕಾಲದಲ್ಲಿ ತಯಾರಾಗಿರೋ ಸಿನಿಮಾ. ಈಗಾಗ್ಲೇ ಟೀಸರ್ ಸುದ್ದಿಯಾಗಿದ್ದ ಈ ಚಿತ್ರ, ಇದೀಗ ಏಕ್ ಧಮ್ ಸೌಂಡ್ ನಲ್ಲಿದೆ. ಕಾರಣ ಹುಡ್ಗಿಬೇಕಾ..? ಬಾಟಲ್ ಬೇಕಾ..? ಇದು ಕಾಲವನೇ ಮೋಸಗಾರ ಚಿತ್ರದ ಮೊದಲ ಹಾಡು… ಟಗರು ಚಿತ್ರದ ಟೈಟಲ್ ಸಾಂಗ್ ಹಾಡಿ ಹೊಸ ಟ್ರೆಂಡ್ ಸೃಷ್ಟಿಸಿ, ಇದೀಗ ಸಲಗದ ಸೂರಿಯಣ್ಣ ಹಾಡಿನ ಮೂಲಕ ಮತ್ತೆ ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋ ತಮಿಳಿನ ಅಂಥೋನಿ ದಾಸ್ ಕಾಲವೇ ಮೋಸಗಾರ ಚಿತ್ರದ ಲವ್ ಫೇಲ್ಯೂರ್ ಹಾಡನ್ನ ಹಾಡಿದ್ದಾರೆ. ಇತ್ತೀಚೆಗಷ್ಟೇ ರಿಲೀಸ್ ಆಗಿರೋ ಹುಡುಗಿ ಬೇಕಾ ಬಾಟಲ್ ಬೇಕಾ ಹಾಡು, ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಪಡ್ಡೆ ಹುಡುಗ್ರ ಎದೆಯ ರಿಂಗಣವಾಗಿದೆ. ಔಟ್ ಅಂಡ್ ಔಟ್ ಮಾಸ್ ಮಸಾಲ ಭರಿತವಾಗಿರೋ ಈ ಸಾಂಗ್ ಕೇಳೋದಕ್ಕೆ ಎಷ್ಟೋ ಕಿಕ್ ಕೊಡ್ತಿದ್ದಿಯೋ ನೋಡದಕ್ಕೂ ಅಷ್ಟೇ ಮಜಭೂತಾಗಿ ಮೂಡಿ ಬಂದಿದೆಯಂತೆ. ಟೀಸರ್ ನಿಂದ ಭರವಸೆ ಹುಟ್ಟಿಸಿರೋ ಕಾಲವೇ ಮೂಸಗಾರ ಇದೀಗ ಮೊದಲ ಲಿರಿಕಲ್ ವಿಡಿಯೋದಿಂದ ನಿರೀಕ್ಷೆ ಹೆಚ್ಚಿಸಿದೆ. ಅಂದ್ಹಾಗೆ, ಕನ್ನಡದ ಜೊತೆಗೆ ಮಲಯಾಳಂ, ತೆಲುಗು ಮತ್ತು ತಮಿಳಿನಲ್ಲೂ ಈ ಸಿನಿಮಾ ಸುದ್ದಿಯಾಗ್ತಿದೆ.
ಭಾವಸ್ಪಂದನ ಪ್ರೊಡಕ್ಷನ್ಸ್ ಮತ್ತು ಬಿ.ಎಂ.ಡಬ್ಲ್ಯೂ ಬ್ಯಾನರ್ ನಿರ್ಮಾಣದಲ್ಲಿ, ರಜತ್ ದುಗ್ಗೋಜಿ ಸಲನಂಕೆ ಬಂಡವಾಳ ಹೂಡಿದ್ದಾರೆ. ಸಂಜಯ್ ವದತ್ ಎಸ್ ನಿರ್ದೇಶನವಿರೋ ಈ ಚಿತ್ರಕ್ಕೆ ಕೆ. ಲೋಕೇಶ್ ಸಂಗೀತ ಸಂಯೋಜಿಸಿದ್ದಾರೆ. ಅಂದ್ಹಾಗೆ ಹುಡ್ಗಿ ಬೇಕಾ ಬಾಟಲ್ ಬೇಕಾ ಹಾಡಿಗೂ ನಿರ್ದೇಶಕ ಸಂಜಯ್ ರದ್ದೇ ಸಾಹಿತ್ಯ ಬರೆದಿದ್ದಾರೆ. ಅಂಥೋನಿ ದಾಸ್ ತುಂಬಾ ಷ್ಟಪಟ್ಟು ಹಾಡಿರೋ ಈ ಹಾಡು ಸದ್ಯ ಎಲ್ಲೆಡೆ ಸಖತ್ ವೈರಲ್ ಆಗ್ತಿದೆ. ಪದೇ ಪದೇ ಕೇಳುವಂತಹ, ಕುಣಿಸುವಂತಹ ಈ ಹಾಡು ಕಾಲವೇ ಮೋಸಗಾರ ಚಿತ್ರದ ಹೈಲೈಟ್ ಗಳಲ್ಲೊಂದಾಗಿದೆ.ಅಂದ್ಹಾಗೆ ಈ ಹಾಡಿನೊಂದಿಗೆ ಪ್ರಚಾರ ಶುರುಮಾಡಿರೋ ಚಿತ್ರತಂಡ ಸದ್ಯದಲ್ಲೇ ಚಿತ್ರದ ಟ್ರೈಲರ್ ನ ರಿಲೀಸ್ ಮಾಡೋ ಪ್ಲಾ ನ್ ನಲ್ಲಿದೆ.