ಸದ್ಯ ರಾಜ್ಯ ರಾಜಕಾರಣದಲ್ಲಿ ಡಿಕೆಶಿ ಕೇಸ್‌ ಕಾವೇರಿದೆ, ಈ ಬಿಕ್ಕಟ್ಟಿನ ನಡುವೆ ಈಗಿನ ಸಿಎಂ ಯಡಿಯೂರಪ್ಪರ ಸುದ್ದಿಯೇ ಕೇಳೋರಿಲ್ಲ, ಅಷ್ಟರ ನಡುವೆ ಈಗ ಮಾಜಿ ಸಿಎಂ ಕುಮಾರಸ್ವಾಮಿ ಅವ್ರ ಮಗನ ಕಲ್ಯಾಣ ಸುದ್ದಿ ಹೊರಬಿದ್ದಿದ್ದೆ. ಆದ್ರೆ ಇದು ಶಾಕ್‌ ಬೀಳುವಂಥಾ ಸುದ್ದಿ ಏನಲ್ಲ. ಸೆಪ್ಟಂಬರ್‌ 15ಕ್ಕೆ ನಿಖಿಲ್‌ ಕುಮಾರಸ್ವಾಮಿ ನಟಿಸಿದ್ದ 2ನೇ ಸಿನಿಮಾ ʻಸೀತಾರಾಮ  ಕಲ್ಯಾಣʼ ಟಿವಿಯಲ್ಲಿ ಪ್ರಸಾರವಾಗ್ತಾ ಇದೆ. ಜೀ ಕನ್ನಡ ವಾಹಿನಿಯಲ್ಲಿ ಭಾನುವಾರ ಸಂಜೆ 4ಕ್ಕೆ ಸೀತಾರಾಮ ಕಲ್ಯಾಣ ಸಿನಿಮಾ ವರ್ಲ್ಡ್‌ ಟೆಲಿವಿಷನ್‌ ಪ್ರೀಮಿಯರ್‌ ಆಗ್ತಾ ಇದೆ.

ವೀಕೆಂಡ್‌ಗಾಗಿ ಫ್ಯಾಮಿಲಿ ಎಂಟರ್‌ಟೈನರ್‌..!

ನಿರ್ದೇಶಕ ಎ ಹರ್ಷ ನಿರ್ದೇಶನದ ಪಕ್ಕಾ ಫ್ಯಾಮಿಲಿ ಎಂಟರ್‌ ಟೈನರ್‌ ಸಿನಿಮಾ ʻಸೀತಾರಾಮ ಕಲ್ಯಾಣʼ ಮನೆ ಮಂದಿಯಲ್ಲ ಕೂತು ನೋಡಬಹುದಾದ ಕೌಟುಂಬಿಕ ಸಿನಿಮಾ. ನಿಖಿಲ್‌ ಕುಮಾರಸ್ವಾಮಿ ಹಾಗೂ ರಚಿತಾ ರಾಮ್‌ ಅಭಿನಯದ ಸಿನಿಮಾದಲ್ಲಿ ಸುಮಾರು 150ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದು, ಹಾಡುಗಳು ತುಂಬಾನೇ ಸೌಂಡ್‌ ಮಾಡಿತ್ತು. ಥಿಯೇಟರ್‌ನಲ್ಲಿ ಅಷ್ಟೆನು ಕಮಾಲ್‌ ಮಾಡದ ಸೀತಾರಾಮ ಕಲ್ಯಾಣ ಟಿವಿಯಲ್ಲಾದ್ರೂ ಮ್ಯಾಜಿಕ್‌ ಮಾಡುತ್ತಾ ಕಾದು ನೋಡ್ಬೇಕು.