,’ಮುದ್ದು ಮನಸೇ’ ಖ್ಯಾತಿಯ ಅನಂತ್ ಶೈನ್ ನಿರ್ದೇಶನದ ‘ವಿರಾಟಪರ್ವ’ ಚಿತ್ರದಲ್ಲಿ ನಾಲ್ವರು ಪ್ರಮುಖ ಪಾತ್ರದಾರಿಗಳಿದ್ದಾರೆ. ಇದರಲ್ಲಿ ಯುವ ಕಲಾವಿದ ಯಶ್ ಶೆಟ್ಟಿ ಅವರು ಎರಡು ವಿಭಿನ್ನ ಬಗೆಯ ಪಾತ್ರಗಳನ್ನು ನಿರ್ವಹಿಸಿರುವುದು ವಿಶೇಷ.
ಬಹುತೇಕ ಚಿತ್ರಗಳಲ್ಲಿ ತನ್ನದೇ ಆದಂತಹ ವಿಶಿಷ್ಟ ಶೈಲಿಯ ನಟನೆಯ ಮೂಲಕ ಜನರಿಗೆ ಹತ್ತಿರವಾಗಿರುವ ಯಶ್ ಶೆಟ್ಟಿ. ಅವರ ವಿಭಿನ್ನ ನಟನೆಯನ್ನು ಮೂಲಕ ದೊಡ್ಡ ದೊಡ್ಡ ಚಿತ್ರಗಳಲ್ಲಿ ಅವಕಾಶಗಳು ದೊರಕುತ್ತಿದೆ. ಕನ್ನಡ ಚಿತ್ರರಂಗಕ್ಕೆ ವಿಶಿಷ್ಟ ಕಳನಟರ ಅಗತ್ಯತೆ ಇದ್ದಾಗ ಭರವಸೆಯ ನಟರಾಗಿ ಹೊರಹೊಮ್ಮಿದ್ದು ನಟ ಯಶ್ ಶೆಟ್ಟಿ. ಬರಿ ಕಾಳನಟನ ಪಾತ್ರದಲ್ಲಿ ಮಿಂಚಿದ ಪ್ರಯೋಗಾತ್ಮಕ ಚಿತ್ರವಾದಂತಹ ಸೂಜಿದಾರದಲ್ಲಿ ತಮ್ಮ ನಟನಾ ಕೌಶಲ್ಯ ತೋರಿಸಿದ್ದಾರೆ.
ಇನ್ನು ಈಗ ವಿರಾಟಪರ್ವ ಚಿತ್ರದಲ್ಲಿ. ವಿಶೇಷ ಪಾತ್ರವೊಂದರ ಮೂಲಕ ಯಶ್ ಶೆಟ್ಟಿ ಅವರು ಕಾಣಿಸಿಕೊಡಿದ್ದು, ರಾಮ್ ಹೆಸರಿನ ಅಸಿಸ್ಟೆಂಟ್ ಡೈರೆಕ್ಟರ್ ಹಾಗೂ ಭಗತ್ ಸಿಂಗ್ ಹೆಸರಿನ ಯೋಧನ ಪಾತ್ರಗಳಲ್ಲಿ ನಟಿಸಿದ್ದಾರೆ.

ಯಶ್ ಶೆಟ್ಟಿ ಅವರು ‘ಜ್ವಲಂತಂ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ‘ಅಥರ್ವ’, ‘ಕೆಜಿಎಫ್’, ‘ಆಯುಷ್ಮಾನ್ ಭವ’ , ‘ಸೂಜಿದಾರ’, ‘ಸಂಹಾರ’, ‘ಅಭಿಸಾರಿಕೆ’, ‘ತ್ರಾಟಕ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಯಶ್ ಶೆಟ್ಟಿ ಅವರು ರಂಗ ನಾಟಕದಲ್ಲಿ ಹೆಚ್ಚು ಅನುಭವ ಇದ್ದು ಯಾವ ಪಾತ್ರ ಕೊಟ್ಟರು ಸಲೀಸಾಗಿ ನಿಭಾಯಿಸುವ ಚಾಕಚಕ್ಯತೆ ಹೊಂದಿದ್ದಾರೆ.ಇನ್ನು ಈ ಚಿತ್ರದಲ್ಲಿ ಯಾವ ರೀತಿಯ ನಟನೆಯನ್ನು ಮಾಡಿದ್ದಾರೆ ಎಂಬುದು ಕಾದುನೋಡಬೇಕಿದೆ.

ಇನ್ನು ಮೊನ್ನೆಯಷ್ಟೇ ಎ 2 ಮ್ಯೂಸಿಕ್‌ ಯೂಟ್ಯೂಬ್‌ ವಾಹಿನಿಯಲ್ಲಿ ‘ವಿರಾಟಪರ್ವ’ ಚಿತ್ರದ ಟೀಸರ್‌ ಅನಾವರಣಗೊಂಡಿದ್ದು, ಟೀಸರ್‌ ಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಸದ್ಯದಲ್ಲಿಯೇ ಸಿನಿಮಾ ತೆರೆಗೆ ಬರಲಿದೆ. .