ಈ ವಾರ ತೆರೆಕಂಡಿರುವ ಹೊಸಬರ ಚಿತ್ರವಾಗಿರುವ ‘ಒಂದು ಶಿಕಾರಿಯ ಕಥೆ’ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಆಡಲಾಗುತ್ತಿದೆ. ಹೊಸಬರ ಕೈಚಳಕ ಅನುಭವಿಗಳಿಗಿಂತ ಹೆಚ್ಚಾಗಿ ಮೂಡಿಬಂದಿದೆ. ಇದರಲ್ಲಿ ಪ್ರಮೋದ್ ಶೆಟ್ಟಿ ಮತ್ತು ಎಂ.ಕೆ ಮಠ ಇಬ್ಬರು ಹಳೆ ಮುಖಗಳು, ಇನ್ನೆಲ್ಲರೂ ಹೊಸ ಮುಖಗಳ ಪರಿಚಯ ಕೊಂಡು ಬರುತ್ತದೆ. ಆದರೂ ಅವರು ಕಾಡುವ ಪಾತ್ರಗಳಾಗಿ ಪ್ರಬುದ್ಧತೆಯ ನಟನೆಯನ್ನು ತೋರಿಸಿದ್ದಾರೆ. ಒಂದು ಶಿಕಾರಿಯ ಕಥೆ ಅದ್ಭುತವಾದ ಕಥೆ ಆದರೆ ಪ್ರೇಕ್ಷಕರಿಗೆ ತಲುಪುವಲ್ಲಿ ವಿಫಲವಾಗುತ್ತಿದೆ.

ಈ ಕಥೆಯು ಮನುಷ್ಯನಲ್ಲಿ ಉದ್ಭವವಾಗುವ ನಾನಾರೀತಿಯ ಆಲೋಚನೆ ಮತ್ತು ದೃಶ್ಯ ಸಂಕಲನ ತುಂಬಿದೆ. ಮನುಷ್ಯ ಯಾವ ರೀತಿಯಲ್ಲಿ ಯೋಚಿಸಬಹುದು ಎಂದು ಸೂಕ್ಷ್ಮವಾಗಿ ತೋರಿಸಲಾಗಿದೆ. ಈ ಚಿತ್ರದಲ್ಲಿ ಕಥನಾಯಕ ಪ್ರಮೋದ್ ಶೆಟ್ಟಿ ಖ್ಯಾತ ಪ್ರಸಿದ್ಧ ಸಾಹಿತಿ ಯಾಗಿರುತ್ತಾರೆ. ಅವರಿಗೆ ಅಭಿಮಾನಿಗಳ ಬಳಗವು ಹೆಚ್ಚಿರುತ್ತದೆ. ಅವರ ದೃಷ್ಟಿಕೋನವು ಕೂಡ ಅಗಾಧವಾಗಿರುತ್ತದೆ. ಒಂದು ಹಂತದಲ್ಲಿ ನಾಯಕನಿಗೆ ಆಧ್ಯಾತ್ಮದ ಕಡೆ ಒಲವು ಬೆಳೆಯುತ್ತದೆ. ಆ ದಾರಿಯನ್ನು ಹಿಡಿಯುವ ಮುನ್ನ ಒಂದು ಶಿಕಾರಿಯನ್ನು ಮಾಡಲೇ ಬೇಕೆಂದು ತೀರ್ಮಾನಿಸಿ ಹೊರಡುತ್ತಾನೆ. ಅದಕ್ಕೆ ಕಾರಣ ಅವರ ತಂದೆ ಯಾಗಿರುತ್ತಾರೆ. ಅವರ ತಂದೆ ತೀರುವ ಮುನ್ನ ಮಗನ 1 ಶಿಕಾರಿ ನೋಡಿಯೇ ತೀರಬೇಕೆಂಬ ಮಹದಾಸೆ ಇರುತ್ತದೆ. ಅವರ ಆಸೆಯನ್ನು ಈಡೇರಿಸುವ ಎಂದು ಹೊರಡುತ್ತಾನೆ. ಸಾಯಿತಿ ಶಿಕಾರಿಗೆ ಹೊರಟಾಗ ಹಲವು ಪಾತ್ರಗಳು ಹಲವು ಕಥೆಗಳು ಉದಯವಾಗುತ್ತದೆ. ಆ ಕತೆಗಳಲ್ಲಿ ಎಲ್ಲಾ ರೀತಿಯ ಭಾವನೆಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಪಾತ್ರದಲ್ಲಿ ಒಂದೊಂದು ಭಾವನೆಗಳನ್ನು ತುಂಬಿ ಕಥೆಯಾಗಿ ಹೊರಬರುತ್ತದೆ. ಈ ಕತೆಗಳಲ್ಲಿ ಗ್ರಾಮೀಣ ಪ್ರದೇಶದ ಆಗುಹೋಗುಗಳನ್ನು ಹಾಗೂ ಸುಂದರ ಜಾಗಗಳನ್ನು ಮನಮೋಹಕವಾಗಿ ಚಿತ್ರಿಸಲಾಗಿದೆ. ಸಂಸ್ಕೃತಿಯನ್ನು ಬಿಂಬಿಸಲಾಗಿದೆ. ಸಾಹಿತಿ ಪ್ರಿಯರಿಗೆ ಮತ್ತು ಕತೆಯನ್ನು ಅರಸುವ ಪ್ರೇಕ್ಷಕರಿಗೆ ಇದೊಂದು ಒಳ್ಳೆಯ ಸಿನಿಮಾವಾಗಿ ತೋರುತ್ತದೆ. ಕಮರ್ಷಿಯಲ್ ಸಿನಿಮಾ ಪ್ರೇಕ್ಷಕರಿಗೆ ಇದೊಂದು ಬೇರೆಯ ರೀತಿಯ ಅನುಭವವನ್ನು ಉಂಟು ಮಾಡುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ಪ್ರಮೋದ್ ಶೆಟ್ಟಿ ಈ ಚಿತ್ರದಲ್ಲಿ ಶಂಭು ಶೆಟ್ಟಿ: ಸಾಹಿತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇಂದಿಗೂ ಕಾಡುವ ಪಾತ್ರವಾಗಿ ಹೊರಹೊಮ್ಮಿದ್ದಾರೆ. ಎಲ್ಲಿಯೂ ಬೇಸರವನ್ನು ತರದೆ ಯಾವ ಸನ್ನಿವೇಶವು ತೀರ ಎನ್ನಿಸದೆ ಸೂಕ್ಷ್ಮವಾಗಿ ಸಚಿನ್ ಶೆಟ್ಟಿ ಅವರು ನಿರ್ದೇಶಿಸಿದ್ದಾರೆ. ಅವರ ಆಲೋಚನೆ ಬೇರೆ ಮಟ್ಟಕ್ಕೆ ಕರೆದು ಹೋಗುವುದು ಈ ಚಿತ್ರದ ಮೂಲಕ ತಿಳಿದುಬರುತ್ತದೆ.