ಕಲರ್ಸ್ ಕನ್ನಡ ವಾಹಿನಿಯಲ್ಲಿ ಈಗ ಮತ್ತೆ ‘ಬಿಗ್ ಬಾಸ್’ ಕಾರ್ಯಕ್ರಮ ಶುರು ಆಗುತ್ತಿದೆ. ಅಕ್ಟೋಬರ್ 2 ನೇ ವಾರದಿಂದ ಕಾರ್ಯಕ್ರಮ ಶುರು ಆಗುತ್ತಿದೆ.ಈ ಬಾರಿ ಪ್ರಮುಖವಾಗಿ ಒಂದಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಬಿಗ್ ಬಾಸ್ ಸೀಸನ್ 7 ರಲ್ಲಿ ಕಾಮನ್ ಮ್ಯಾನ್ ಗಳಿಗೆ ಅವಕಾಶ ಇಲ್ಲ. ಮೊದಲೆಲ್ಲಾ ‘ಬಿಗ್ ಬಾಸ್’, ಬರೀ ಸೆಲೆಬ್ರಿಟಿಗಳಿಗಾಗಿ ಇದ್ದ ಕಾರ್ಯಕ್ರಮ. ಆದ್ರೆ ಅದನ್ನ ಬ್ರೇಕ್ ಮಾಡಿ, ಸಾಮಾನ್ಯ ಜನರಿಗೂ, ದೊಡ್ಡ ಮನೆ ಪ್ರವೇಶಿಸುವ ಅವಕಾಶವನ್ನ ಕಲರ್ಸ್ ಕನ್ನಡ ವಾಹಿನಿ ನೀಡಿತ್ತು. ಸೀಸನ್ 5 ಹಾಗೂ ಸೀಸನ್ 6 ರಲ್ಲಿ ಒಂದಷ್ಟು ಕಾಮನ್ ಮ್ಯಾನ್ ಗಳು ಬಂದು ಸ್ಟಾರ್ ಆದ್ರೂ.

ಕಳೆದ ಎರಡು ಸೀಸನ್ ಗಳಲ್ಲಿ ‘ಬಿಗ್ ಬಾಸ್’ ಕಾರ್ಯಕ್ರಮದ ಟಿ ಆರ್ ಪಿ ಕಡಿಮೆ ಆಗಿತ್ತು. ಎಷ್ಟೋ ಬಾರಿ ಧಾರಾವಾಹಿಗಳೇ ಬಿಗ್ ಬಾಸ್ ಶೋವನ್ನು ಓವರ್ ಟೆಕ್ ಮಾಡಿದ್ವು ಕಾರ್ಯಕ್ರಮದ ಟಿ ಆರ್ ಪಿ ಕಡಿಮೆಯಾಗಿರುವ ಕಾರಣಗಳಲ್ಲಿ ಕಾಮನ್ ಮ್ಯಾನ್ ಗೆ ನೀಡಿದ ಅವಕಾಶ ಕೂಡ ಒಂದಾಗಿರಬಹುದು. ಸಾಮಾನ್ಯವಾಗಿ ವೀಕ್ಷಕರಿಗೆ ಒಬ್ಬ ಸ್ಟಾರ್, ಸೆಲೆಬ್ರಿಟಿಗಳ ಹೆಚ್ಚು ಆಸಕ್ತಿ ಇರುತ್ತದೆ. ಆದರೆ, ತನ್ನ ರೀತಿಯಲ್ಲೇ ಇರುವ, ಇನ್ನೊಬ್ಬ ಕಾಮನ್ ಮ್ಯಾನ್ ಮೇಲೆ ಆಸಕ್ತಿ ಕಡಿಮೆ. ಹೀಗಾಗಿಯೇ, ಕಾರ್ಯಕ್ರಮ ವೀಕ್ಷಕ ಬಳಗ ಕೂಡ ಕಡಿಮೆ ಆಗಿರಬಹುದು. ಅಲ್ಲಿದೆ, ವೀಕ್ಷಕರ ಕಣ್ಣಿಗೆ ಸೆಲೆಬ್ರಿಟಿಗಳು ಸಾಮಾನ್ಯರಿಗಿಂತ ಹೆಚ್ಚು ಅಟ್ರ್ಯಾಕ್ಷನ್ ತೋರ್ತಾರೆ.