ಅರ್ಜುನ್ “ಕಿಸ್” ನಲ್ಲಿದೆ ವೆರೈಟಿ… ಅದೇ ಪ್ರೀತಿ ಬೇರೆ ರೀತಿ…!!!

ಚಿತ್ರ– ಕಿಸ್

ನಿರ್ದೇಶನ, ನಿರ್ಮಾಣ– ಎಪಿ ಅರ್ಜುನ್

ತಾರಾಗಣ– ವಿರಾಟ್, ಶ್ರೀಲೀಲಾ, ಚಿಕ್ಕಣ್ಣ ಮತ್ತು ಸಾಧುಕೋಕಿಲಾ, ಅಪೂರ್ವ ಗೌಡ, ಇನ್ನಿತರರು.

ಸಂಗೀತ– ವಿ. ಹರಿಕೃಷ್ಣ, ಆದಿ ಹರಿಕೃಷ್ಣ

ಛಾಯಾಗ್ರಹಣ– ಅರ್ಜುನ್ ಶೆಟ್ಟಿ

ಕಿಸ್,,, ಎಪಿ ಅರ್ಜುನ್ ನಿರ್ದೇಶನ ನಿರ್ಮಾಣದಲ್ಲಿ ತಯಾರಾಗಿರೋ ಸಿನಿಮಾ. ಟೀಸರ್, ಸಾಂಗ್, ಹಾಗೂ ಟ್ರೈಲರ್ ನಿಂದ ಕನ್ನಡ ಸಿನಿಪ್ರಿಯರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ. ಟ್ರೆಂಡಿ ಹಾಡುಗಳ ಜೊತೆಗೆ ಹೊಸ ಮುದ್ದು ಮುಖಗಳು ಸಿನಿಮಾ ರಿಲೀಸ್ ಗೂ ಮೊದ್ಲೇ ಭಾರಿ ಭರವಸೆ ಹುಟ್ಟಿಸಿದ್ವು.. ಅದ್ರಂತೆ, ಇವತ್ತು ಕಿಸ್ ಸಿನಿಮಾ ರಾಜ್ಯದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ.. ಹೊಸ ನಾಯಕ ನಾಯಕಿ ಸಿನಿಮಾ ಆದ್ರೂ ಹಳೇ ಡೈರೆಕ್ಟರ್ ಬ್ರ್ಯಾಂಡ್ ಮೇಲೆ ರಿಲೀಸ್ ಆಗಿರೋ ಕಿಸ್ ಸಿನಿಮಾಗೆ ರಾಜ್ಯದಾದ್ಯಂತ ಎಲ್ಲೆಡೆ ಉತ್ತಮ ಓಪನಿಂಗ್ ಜೊತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಕಿಸ್ ಸಿನಿಮಾ ನಮ್ಮ ಕನ್ನಡ‌ ಪಿಚ್ಚರ್ ಕಣ್ಣಿಗೆ ಹೇಗೆ ಕಂಡಿದೆ. ಕಿಸ್ ಸಿನಿಮಾದ ಕಥೆ ಏನು..? ಗುಣಮಟ್ಟವೇನು..? ಈ ಸಿನಿಮಾದ ಪ್ಲಸ್ ಏನು..? ಮೈನಸ್ ಏನು..? ಟೋಟಲಿ ಕಿಸ್ ಸಿನಿಮಾ ಹೇಗಿದೆ ಅನ್ನೋದ್ರ ಡಿಟೇಲ್ಡ್ ರಿಪೋರ್ಟ್ ಹೀಗಿದೆ ಓದಿ…

ಕಿಸ್ ಓನ್ ಲೈನ್ ಸ್ಟೋರಿ

ಕಿಸ್ ಟ್ಯಾಗ್ ಲೈನೇ ಹೇಳುವಂತೆ ಇದು ಎರಡು ತುಂಟ ತುಟಿಗಳ ಆಟೋಗ್ರಾಫ್. ಎರಡು ಮುದ್ದು ಹೃದಯಗಳ ಪರಿಪರಿ ಪ್ರೀತಿಯ ಕಥೆ… ಕಿಸ್ ಟೈಟಲ್ ಹೇಳುವಂತೆ ಇದು ಅಪ್ಪಟ ಪ್ರೇಮಕಥೆ. ಹಾಗಂತ ಕೌಟುಂಬಿಕ ಅಂಶಗಳು ಇಲ್ಲ ಅಂತಲ್ಲ. ಆ ಎಲ್ಲಾ ಎಲಿಮೆಂಟ್ಸ್ ನ ಇಟ್ಟುಕೊಂಡು, ಈ ಜನರೇಷನ್ ಹರೆಯದ ಮನಗಳಲ್ಲಿನ ಆಕರ್ಷಣೆ, ಪ್ರೀತಿ, ಪ್ರೇಮ, ತಳಮಳವನ್ನ ಪ್ರಸ್ತುತತೆಗೆ ಹತ್ತಿರವಾಗಿ, ತೀರಾ ರಿಯಲಿಸ್ಟಿಕ್ ಆಗಿ ನಿರ್ದೇಶಕ ಎ.ಪಿ ಅರ್ಜುನ್ ಕಥೆಯನ್ನ ಹೆಣೆದಿದ್ದಾರೆ. ಅದೇ ಪ್ರೀತಿ ಕಥೆಯಾದ್ರು. ಅದ್ರ ನಿರೂಪಣೆಯ ರೀತಿ ಬೇರೆ ರೀತಿಯೇ ಇದೆ.

ಕಿಸ್ ಸಿನಿಮಾದ ಹೈಲೈಟ್ಸ್

ಕಿಸ್ ಸಿನಿಮಾದ ಹೈಲೈಟ್ಸ್ ಅಂತ ನೋಡೋದಾದ್ರೆ, ಈ ಚಿತ್ರದ ಮೊದಲ ಹೈಲೈಟೇ, ಆಯ್ಕೆ ಮಾಡಿಕೊಂಡಿರೋ ಟೈಟಲ್ ಮತ್ತು ಕಥೆ.. ಹೊಸ ಪ್ರತಿಭೆಗಳನ್ನ ಲಾಂಚ್ ಮಾಡೋದ್ರಲ್ಲಿ ನಿಪುಣ ಎನ್ನಿಸಿಕೊಂಡಿರೋ ನಿರ್ದೇಶಕ ಎಪಿ ಅರ್ಜುನ್ ಕಿಸ್ ಸಿನಿಮಾವನ್ನ ರೊಮ್ಯಾಂಟಿಕ್ ಫಾರ್ಮ್ಯಾಟ್ ನಲ್ಲಿ ,ಪ್ರೀತಿಯ ಸೂತ್ರದಲ್ಲಿ, ಫ್ಯಾಮಿಲಿ ಎಲ್ಲಾ ಕೂತು ನೋಡುವಂತೆ ಹ ಮಾಡಿದ್ದಾರೆ.. ನಿರ್ದೇಶಕರೇ ನಿರ್ಮಾಪಕರಾಗಿರೋದ್ರಿಂದ, ಈ ಚಿತ್ರದ ಗುಣಮಟ್ಟ ಸಖತ್ ಕ್ಲಾಸ್ ಆಗಿದೆ.. ಕ್ವಾಲಿಟಿಯಾಗಿದೆ.. ಕಲರ್ ಫುಲ್ಲಾಗಿದೆ.. ಎಪಿ ಅರ್ಜುನ್ ವಿಶನ್ ಗೆ ತಕ್ಕಂತೆ, ಕ್ಯಾಮೆರಾ ಮ್ಯಾರ್ ಅರ್ಜುನ್ ಶೆಟ್ಟಿ ಫ್ರೆಮ್ ಟು ಫ್ರೆಮ್ ಸೀನ್ ಟು ಸೀನ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ನಿರ್ದೇಶಕರು ಆಯ್ಕೆ ಮಾಡಿಕೊಂಡಿರೋ ಲೊಕೇಶನ್ಸ್ ಎಕ್ಸೆಲೆಂಟಾಗಿದೆ.. ಕಿಸ್ ಎಡಿಟರ್ ದೀಪು ಎಸ್ ಕುಮಾರ್ ಕೈಚಳಕ ತುಂಬಾ ಚೆನ್ನಾಗಿ ಸಾಥ್ ಕೊಟ್ಟಿದೆ.

ಕಿಸ್ ಸಿನಿಮಾದ ಮೊದಲ ಚಿತ್ರವಾದ್ರೂ, ನಾಯಕ ವಿರಾಟ್ ಭರವಸೆಯ ನಟನೆಯನ್ನ ಮಾಡಿದ್ದಾರೆ.. ಡ್ಯಾನ್ಸ್ ಅಂಡ್ ಈ ಆಕ್ಷನ್ ನಲ್ಲಿ ಈ ನಟ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಹೀರೋ ಆಗಿ ನಿಲ್ಲೋ ಲಕ್ಷಣಗಳನ್ನ ತೋರಿಸಿದ್ದಾರೆ.. ಭವಿಷ್ಯದ ತಾರೆಯಾಗುವಂತ ಪ್ರತಿಭೆಯನ್ನ ಕಿಸ್ ಮೂಲಕ ಪ್ರದರ್ಶಿಸಿದ್ದಾರೆ..

ನಾಯಕಿ ಶ್ರೀಲೀಲಾ ಪರ್ಫಾರ್ಮೆನ್ಸ್ ಈ ಸಿನಿಮಾದ ದೊಡ್ಡ ಪ್ಲಸ್. ನಾಯಕಿಯ ಅಪಿಯರೆನ್ಸ್ ಮತ್ತು ಅಭಿನಯ ಎರಡೂ ಸೂಪರ್. ಮೊದಲ ಚಿತ್ರದಲ್ಲೇ ಶ್ರೀಲೀಲಾ ಮಾಡಿರೋ ಅಭಿನಯದ ನೋಡುಗರಿಗೆ ಬೆರಗುಟ್ಟಿಸುತ್ತೆ. ಅಷ್ಟು ಪ್ರೊಫೆಶನಲ್ ಆಗಿದೆ ಆಕೆಯ ಆಕ್ಟಿಂಗ್. ಶ್ರೀಲೀಲಾ ಗ್ಯಾರೆಂಟಿ ಸ್ಯಾಂಡಲ್ ವುಡ್ ನ ಒಂದಷ್ಟು ವರ್ಷ ಆಳುವಂತಹ ನಟಿಯಾಗೋದ್ರಲ್ಲಿ ಎರಡು ಮಾತಿಲ್ಲ. ಯಾಕೆಂದ್ರೆ, ಕಿಸ್ ನಲ್ಲಿ ಈ ಮುದ್ದು ಮೊಗದ ಹುಡ್ಗಿ ಅಂತಹ ಕಮಾಲ್ ಮಾಡಿದ್ದಾರೆ.

ಚಿಕ್ಕಣ್ಣ ಹಾಗೂ ಸಾಧು ಕೋಕಿಲಾ ಕಿಸ್ ಸಿನಿಮಾದ ಮತ್ತೊಂದು ಮೇಜರ್ ಸ್ಟ್ರೆಂತ್ ಅಂದ್ರೆ ತಪ್ಪಾಗಲ್ಲ.. ಚಿಕ್ಕಣ್ಣ ಕಾಮಿಡಿ ಟೈಮಿಂಗ್ ಹಾಗೂ ಪರ್ಫಾರ್ಮೆನ್ಸ್ ಕಿಸ್ ಸಿನಿಮಾವನ್ನ ಮತ್ತೊಂದು ಲೆವ್ವೆಲ್ ಗೆ ತೆಗೆದುಕೊಂಡು ಹೋಗಿದೆ. ನಗಿಸೋದ್ರಲ್ಲಿ ಚಿಕ್ಕಣ್ಣ ಹಾಗೂ ಸಾಧುಕೋಕಿಲಾ ಮ್ಯಾಜಿಕ್ ಮಾಡಿದ್ದಾರೆ. ಕಿಸ್ ಸಿನಿಮಾ ಪ್ರೇಮ ಕಥೆ ಅಂದ ಮಾತ್ರಕ್ಕೆ ಯಾವುದೇ ಕಾರಣತ್ತೂ ಶೃಂಗಾರ ಭರಿತವಾಗಿಲ್ಲ… ಅಪ್ಪಟ ಕ್ಲಾಸ್ ಆಗಿದೆ.. ಫ್ಯಾಮಿಲಿಗಳು ಕೂತು ನೋಡಿ ಎಂಜಾಯ್ ಮಾಡುವಂತಹ ಅಂಶಗಳಿಂದ ಕೂಡಿದೆ.. ಎಸ್ಪೆಷಲಿ ಕಾಲೇಜು ಯುವಕ ಯುವತಿಯರಿಗೆ ಈ ಸಿನಿಮಾ ಮನಮುಟ್ಟುತ್ತೆ. ತಮ್ಮದೇ ಕಥೆ ಇದು ಅಂತ ಫೀಲ್ ಮಾಡಿಸುತ್ತೆ. ಅರ್ಜುನ್ ಅಷ್ಟು ಮಜಭೂತಾಗಿ ಚಿತ್ರಿಸಿದ್ದಾರೆ.

ಕಿಸ್ ಸಿನಿಮಾಗೆ ಮತ್ತೊಂದು ದೊಡ್ಡ ತಾಖತ್ ಅಂದ್ರೆ ಅದು ಮ್ಯೂಸಿಕ್. ಈಗಾಗ್ಲೇ ತಮ್ಮದು ಸಕ್ಸಸ್ ಫುಲ್ ಕಾಂಬೋ ಅಂತ ತೋರಿಸಿರೋ ವಿ. ಹರಿಕೃಷ್ಣ ಹಾಗೂ ಎಪಿ ಅರ್ಜುನ್ ಸಂಗೀತ ಸಂಯೋಜನೆ ಅದ್ಭುತವಾಗಿದೆ.. ಮೂರು ಹಾಡುಗಳಂತೂ ಕಾಡ್ತಾವೆ. ಗುಂಗಿಡಿಸ್ತಾವೆ. ಅದ್ರಲ್ಲೂ ಹರಿಕೃಷ್ಣ ಪುತ್ರ ಆದಿ ಹರಿಕೃಷ್ಣ ಚೊಚ್ಚಲ ಸಂಗೀತ ನಿರ್ದೇಶಕನ ನೀನೆ ಮೊದಲು ಹಾಡಂತೂ ನೋಡುಗರನ್ನ ಹುಚ್ಚೆಬ್ಬಿಸುತ್ತೆ. ಹಿನ್ನೆಲೆ ಸಂಗೀತ ಕಿಸ್ ಸಿನಿಮಾದ ಎಮೋಷನ್ ನ ಲವ್ ನಾ ತುಂಬಾ ಚೆನ್ನಾಗಿ ಕ್ಯಾರಿ ಮಾಡಿದೆ. ಎಸ್ಪೆಷಲಿ ಕ್ಲೈಮ್ಯಾಕ್ಸ್ ನಲ್ಲಿ ಕಿಸ್ ಟೈಟಲ್ ಗೆ ಅರ್ಥ ಸಿಗೋ ಟೈಂ. ನಾಯಕಿ ನಾಯಕಿ ಲಿಪ್ ಲಾಕ್ ಮಾಡೋ ಟೈಂ . ಎಕ್ಸೆಲೆಂಟ್ ವರ್ಕ್. ಕಿಸ್ ಕನ್ನಡ ಚಿತ್ರರಂಗದ ಹೊಸ ಅಪ್ ಗ್ರೇಡೆಡ್ ಲವ್ ಸಿನಿಮಾ. ಇಲ್ಲಿಂದ ಬರೋ ಲವ್ ಸ್ಟೋರಿಗಳು ಇನ್ನಷ್ಟು ಫಾರ್ವಡ್ ಆಗುವಂಹ ಟ್ರೆಂಡ್ ನ ಈ ಜನರೇಷಶನ್ ಗೆ ತಕ್ಕಂತೆ ಸೆಟ್ ಮಾಡಿದೆ ಅಂದ್ರೆ ತಪ್ಪಾಗಲ್ಲ..

ಕಿಸ್ ಪ್ಲಸ್ ಏನು..? ಮೈನಸ್ ಏನು..?

ಕಿಸ್ ಸಿನಿಮಾದ ಪ್ಲಸ್ ಕ್ಯೂಟ್ ಅಂಡ ಟ್ಯಾಲೆಂಟೆಡ್ ಸ್ಟಾರ್ ಕಾಸ್ಟ್ ಮತ್ತು ಅವ್ರ ಫರ್ಪಾರ್ಮೆನ್ಸ್. ಟೇಸ್ಟ್ ಫುಲ್ ಅಂಡ್ ಕ್ರಿಯೇಟೀವ್ ಡೈರೆಕ್ಷನ್. ಟೆಕ್ನಿಕಲಿ ಕಿಸ್ ಎಕ್ಸೆಂಟ್. ಮ್ಯೂಸಿಕಲಿ ಈ ಸಿನಿಮಾ ಪದೇ ಪದೇ ಥಿಯೇಟರ್ ಗೆ ಕರೆಸಿಕೊಳ್ಳುವಂತಹ ಶಕ್ತಿಯನ್ನ ಹೊಂದಿದೆ..

ಜೊತೆಗೆ ಒಂದಷ್ಚು ಕಡೆ ಲಾಜಿಕ್ ಇಲ್ಲದ ಸೀಕ್ವೆನ್ಸ್ ಬೇಕಿರಲಿಲ್ಲ. ಮತ್ತು ಕೆಲವೆಡೆ ಸಣ್ಣ ಸಣ್ಣ ವಿಚಾರಗಳಲ್ಲಿ, ನಿರ್ದೇಶಕರ ಆಲೋಚನೆ ಅದ್ಧೂರಿಯನ್ನ ಬಿಟ್ಟು ಬಂದಿಲ್ಲ ಅಂತ ಕಾಣಸಿಗುತ್ತೆ.. ಅದು ಅವ್ರ ಶೈಲಿಯಾಗಿರಬಹುದು. ಆದ್ರೆ, ಹೊಸ ಸೂತ್ರದಲ್ಲಿ ನಿರ್ದೇಶನ ಮಾಡಿದಾಗ ಅದು ಅದಕ್ಕೆ ಸಂಪೂರ್ಣತೆಯನ್ನ ಕೊಟ್ಟು ಬಿಟ್ಟಿದ್ದರೆ ಕಿಸ್ ಹೊಸ ಫ್ಲೇವರ್ ಇನ್ನಷ್ಟು ಘಮಿಸುತ್ತಿತ್ತು. ಅದನ್ನ ಬಿಟ್ಟಿಟ್ರೆ, ಎಲ್ಲಾ ಆಂಗಲ್ ನಿಂದ್ಲೂ ಇಷ್ಟವಾಗೋ ಕಿಸ್ ಸ್ವಲ್ಪ ಲ್ಯಾಗ್ ಆಯ್ತಾ ಅನ್ನೋ ಫೀಲ್ ಬರುತ್ತೆ.. ಕೆಲ ಹಾಡುಗಳು ಅನವಶ್ಯಕ ಅನ್ನಿಸುತ್ತೆ. ಸುಮಾರು 20 ನಿಮಿಷದಷ್ಟು ಸಿನಿಮಾ ಟ್ರಿಮ್ ಆದ್ರೆ, ನೋಡೋರಿಗೆ ಕಿಸ್ ಮತ್ತಷ್ಟು ಕಿಕ್ ಕೊಡಬಹುದು ಅನ್ನೋದು ನಮ್ಮ ಅನಿಸಿಕೆ.

ರಿವ್ಯೂ ಫೈನಲ್ ರಿಪೋರ್ಟ್

ಕಿಸ್ ಎಲ್ಲಾ ವರ್ಗದವರು ನೋಡಬಹುದಾದಂತಹ ಸಿನಿಮಾ. ಅದ್ರಲ್ಲೂ ಹರೆಯದ ಮನಸುಗಳಿಗೆ ಹೆಚ್ಚು ಇಷ್ಟವಾಗುವಂತಹ ಅಂಶಗಳು ಈ ಚಿತ್ರದಲ್ಲಿದೆ. ಎಲ್ಲಾ ರೀತಿಯಲ್ಲೂ ಒಂದೊಳ್ಳೆ ಫೀಲ್ ಕೊಡುವಂತಹ ಗುಣವಿರೋ ಕಿಸ್ ಸಿನಿಮಾವನ್ನ ಮಿಸ್ ಮಾಡ್ಬೇಡಿ.. ನಿಮ್ಮ ಜೋಡಿಯ ಜೊತೆಗೆ, ಸ್ನೇಹಿತರ ಗುಂಪಿನೊಂದಿಗೆ ಅಷ್ಟೇ ಯಾಕೆ ಮನೆಮಂದಿಯ ಜೊತೆಗೆ ಒಂದೊಳ್ಳೆ ಸಿನಿಮಾ ನೋಡ್ಬೇಕು ಅಂದ್ರೆ ಕಿಸ್ ಸಿನಿಮಾ ಒಳ್ಳೆಯ ಆಯ್ಕೆ.

ಕನ್ನಡ‌ ಪಿಚ್ಚರ್ ರೇಟಿಂಗ್ 3/5