ಸ್ಯಾಂಡಲ್ ವುಡ್ ಅಂಗಳದಲ್ಲಿ ಭಾರಿ ಕುತೂಹಲ ಹುಟ್ಟಿಸಿರೋ ದುನಿಯಾ ಸೂರಿ ನಿರ್ದೇಶನದ ಡಾಲಿ ಧನಂಜಯ ಅಭಿನಯದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ. ಸೆನ್ಸಾರ್ ಮುಗಿಸಿ, ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಮಹಾಶಿವರಾತ್ರಿ ಹಬ್ಬದಂದು ಅಂದ್ರೆ, ಇದೇ ತಿಂಗಳ 21ಕ್ಕೆ ರಾಜ್ಯದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಮಾದೇವ ಸಾಂಗ್ ಮತ್ತು ಟೀಸರ್ ನಿಂದ ಕನ್ನಡ ಚಿತ್ರಪ್ರಿಯರಲ್ಲಿ ಅತೀವ ನಿರೀಕ್ಷೆ ಹುಟ್ಟಿಸಿರೋ ಈ ಸಿನಿಮಾ ಇದೀಗ ರಿಲೀಸ್ ಡೇಟ್ ಅನೌನ್ಸ್ ಮಾಡಿರೋದು ಅಭಿಮಾನಿಗಳಿಗೆ ಸಂತಸ ತಂದಿದೆ.

ಟಗರು ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಡಾಲಿ ಧನಂಜಯ ಮತ್ತು ಸೂರಿ ಕಾಂಬಿನೇಷನ್ ಮತ್ತೊಂದು ರಾ ಸಿನಿಮಾ ಪಾಪ್ ಕಾರ್ನ್ ಮಂಕಿ ಟೈಗರ್ ಇದಾಗಿದ್ದು, ಈಗಾಗ್ಲೇ ಸಾಕಷ್ಟು ವಿಶಿಷ್ಠ ವಿಚಾರಗಳಿಂದ ಸಿನಿಪ್ರಿಯರಲ್ಲಿ ಭರವಸೆ ಹುಟ್ಟಿಸಿದೆ.
ಈ ಚಿತ್ರದಲ್ಲಿ ಡಾಲಿ ಧನಂಜಯ ಜೊತೆಗೆ ನಿವೇದಿತಾ ಸ್ಮಿತಾ, ಅಮೃತಾ ಐಯ್ಯಂಗಾರ್, ಸಪ್ತಮಿ, ಕಾಕ್ರೋಚ್ ಸುಧೀ, ಪೂರ್ಣಚಂದ್ರ ತೇಜಸ್ವಿ, ಮೌನೀಶ ನಾಡಿಗೇರ್ ಸೇರಿದಂತೆ ಪ್ರತಿಭಾವಂತ ತಾರಾಬಳಗವಿದೆ.

ಟಗರು ಚಿತ್ರಕ್ಕೆ ಟ್ರೆಂಡಿ ಸಂಗೀತ ಕೊಟ್ಟು ಕಮಾಲ್ ಮಾಡಿದ್ದ ಚರಣ್ ರಾಜ್ ಸಂಗೀತ ಈ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಇನ್ನೂ ಶೇಖರ್ ಛಾಯಾಗ್ರಹಣ ಹೈಲೈಟ್ ಆಗಿ ಕಾಣ್ತಿದ್ದು, ನಿರ್ಮಾಪಕ ಸುಧೀರ್ ಕೆ.ಎಮ್ ಅದ್ಧೂರಿಯಾಗಿ ಚಿತ್ರವನ್ನ ನಿರ್ಮಿಸಿದ್ದಾರೆ. ಅಂದ್ಹಾಗೆ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾವನ್ನ ಸುಧೀರ್ ಮೋಹನ್ ಫಿಲಂಸ್ ಮತ್ತು ಪುಷ್ಕರ್ ಫಿಲಂಸ್ ಜಂಟಿ ವಿತರಣೆಯಲ್ಲಿ ದೇಶದಾದ್ಯಂತ ಚಿತ್ರವನ್ನ ವಿತರಿಸ್ತಿದ್ದಾರೆ.