ಕೆಲವು ದಿನಗಳ ಹಿಂದೆಯಷ್ಟೆ ರಿಲೀಸ್‌ ಆಗಿದ್ದ ಪಾಪ್ಯುಲರ್‌ ಗಾಯಕ ನವೀನ್‌ ಸಜ್ಜು ಹಾಡಿರೋ ʻಏನ್‌ ಚಂದಾನೋ ತಕೋʼ ಹಾಡು ಈಗ ವಿವಾದಕ್ಕೋಳಗಾಗಿದೆ. ‘ಬಡ್ಡಿಮಗನ್ ಲೈಫು’ ಅನ್ನೊ ಸಿನಿಮಾದಲ್ಲಿರೋ ‘ಏನ್ ಚಂದನೋ ತಕಾ’ ಹಾಡು ಪಕ್ಕಾ ದೇಸಿ ಸ್ಟೈಲ್‌ನಲ್ಲಿರೋ ಹಾಡು, ತನ್ನ ಹೊಸ ಫ್ಲೇವರ್‌ನಿಂದಲೇ ಎಲ್ಲರ ಬಾಯಲ್ಲೂ ನಲಿದಾಡ್ತಾ ಇದೆ, ಆದ್ರೆ ಈ ಹಾಡಿನ ಬಗ್ಗೆ ಕರ್ನಾಟಕ ನಿರ್ಮಾಪಕರ ಸಂಘದ ಸದಸ್ಯ ಬಾ.ಮಾ.ಹರೀಶ್ ಗರಂ ಆಗಿದ್ದಾರೆ. ಹಾಡಿನಲ್ಲಿ ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡಲಾಗಿದೆ. ಹಾಡಿನ ಮೂಲಕ ಒಕ್ಕಲಿಗ ಹೆಣ್ಣುಮಕ್ಕಳ ತೇಜೋವಧೆ ಮಾಡುವುದು ಸರಿಯಲ್ಲ ಅಂತ ಆರೋಪಿಸಿದ್ದಾರೆ. ಈಗಲೇ ನವೀನ್‌ ಸಜ್ಜು ಕ್ಷಮೆಯಾಚಿಸಬೇಕು..! ತಮ್ಮ ಟ್ವಿಟರ್ ಖಾತೆಯಲ್ಲಿ ಅಸಮಾಧಾನ ಹೊರಹಾಕಿದ ನಿರ್ಮಾಪಕ ಬಾ.ಮಾ ಹರೀಶ್, ಈ ಕೂಡಲೇ ನವೀನ್ ಸಜ್ಜು ಒಕ್ಕಲಿಗ ಸಮುದಾಯದ ಕ್ಷಮೆಯಾಚಿಸಬೇಕು ಅಂತ ಬರೆದಿದ್ದಾರೆ.ಕ್ಷಮೆಗೆ ಒತ್ತಾಯಿಸಿ ಪೋಸ್ಟ್ ಮೂಲಕ ಆಗ್ರಹಿಸಿರುವ ನಿರ್ಮಾಪಕ ಬಾ.ಮಾ.ಹರೀಶ್. ಆದರೇ ಈ ಹಾಡು ಈಗಾಗ್ಲೆ ೧ ಮಿಲಿಯನ್‌ ಗೂ ಹೆಚ್ಚಿನ ವೀಕ್ಷಣೆಯನ್ನ ಕಂಡಿದ್ದು, ಈ ಕಿರಿಕ್‌ ನಿಂದಾಗಿ ಈ ಹಾಡಿನ ಪಾಪ್ಯುಲಾರಿಟಿ ಇನ್ನಷ್ಟು ಹೆಚ್ಚಾಗೋದ್ರಲ್ಲಿ ಡೌಟೇ ಇಲ್ಲ. ಫೈನಲಿ ಈ ಹಾಡು ನೋಡಿ ಕಿರಿಕ್‌ ಮಾಡಿದವ್ರನ್ನ ನೋಡಿದ್ರೆ ಇದೆಲ್ಲಾ ಏನ್‌ ಚಂದಾನ ತಕೋ ಅನ್ನೋ ಹಾಗಾಗಿದೆ