ಲಿವರ್ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ನಟ ವೇಣು ಸಿಕಂದ್ರಾಬಾದ್ ಕಾರ್ಪೊರೇಟ್ ಆಸ್ಪತ್ರೆಗೆ ದಾಖಲಾಗಿದ್ರು.ಕೆಲವು ದಿನಗಳಿಂದ ಜೀವ ರಕ್ಷಕ ಯಂತ್ರದಿಂದ ಉಸಿರಾಡುತ್ತಿದ್ರು ವೇಣು ಮಾಧವ್. ಕೇವಲ 39ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ ವೇಣು.

ಟಾಲಿವುಡ್ ನಲ್ಲಿ ಹಾಸ್ಯ ಪಾತ್ರಗಳ ಮೂಲಕವೇ ಮನೆಮಾತಾಗಿದ್ದ ವೇಣು,ತೆಲುಗುದೇಶಂ ಪಕ್ಷದಲ್ಲಿ ಸಕ್ರಿಯರಾಗಿದ್ದರು.1996ರಲ್ಲಿ ‘ಸಂಪ್ರದಾಯಮ್’ ಚಿತ್ರದ ಮೂಲಕ ಟಾಲಿವುಡ್ ಪಾದಾರ್ಪಣೆ ಮಾಡಿದ್ದ ಈ ಹಾಸ್ಯ ನಟ, 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.