ಟ್ವಿಟ್ಟರ್ ಇತಿಹಾಸದಲ್ಲೇ ಮೊದಲ ಕನ್ನಡ ಲೈವ್ ..!!! ಪೈಲ್ವಾನ್ ನಿಂದ ಪ್ರಾರಂಭ…!!!

ಪೈಲ್ವಾನ್ ಸಿನಿಮಾ ಹಲವು ಮೊದಲುಗಳಿಗೆ ಕಾರಣವಾಗ್ತಿದೆ.. ಅದು ಸಿನಿಮಾವಾಗಿ, ಮೇಕಿಂಗ್ ವಿಚಾರವಾಗಿ, ಸುದೀಪ್ ಅವ್ರ ವೃತ್ತಿ ಬದುಕಿನ ವಿಚಾರವಾಗಿ.. ಅದಲ್ಲದೆ, ಇದೀಗ ಮತ್ತೊಂದು ವಿಚಾರಕ್ಕೆ ಪೈಲ್ವಾನ್ ಸಿನಿಮಾ ಮತ್ತು ಸುದೀಪ್ ಹೊಸ ದಾಖಲೆಗೆ, ಇತಿಹಾಸಕ್ಕೆ ನಾಂದಿ ಹಾಡಿದ್ದಾರೆ.. ಹೌದು, ಅದೇನಪ್ಪಾ ಅಂದ್ರೆ, ಸೋಶಿಯನ್ ನೆಟ್ ವರ್ಕ್ ಗಳಲ್ಲಿ ಅತಿ ಹೆಚ್ಚು ಜನಪ್ರಿಯ ಮತ್ತು ಪ್ರಚಲಿತದಲ್ಲಿರೋ ಟ್ವಿಟ್ಟರ್, ಇದೇ ಮೊದಲ ಬಾರಿಗೆ ಕನ್ನಡದ ಸ್ಟಾರ್ ಒಬ್ಬರಿಗೆ ತನ್ನ ಬ್ಲೂ ರೂಂಗೆ ಆಹ್ವಾನ ನೀಡಿತ್ತು. ಟ್ವಿಟರ್ ನಲ್ಲಿ ತುಂಬಾ ಆಕ್ಟೀವ್ ಆಗಿರೋ ಕಿಚ್ಚ ಸುದೀಪ್ ರ ಪೈಲ್ವಾನ್ ಸಿನಿಮಾದ ಕ್ರೇಜ್ ಕಂಡು ಬೆರಗಾಗಿರೋ ಟ್ವಿಟ್ಟರ್ ಇಂಡಿಯಾ ಟೀಮ್, ಪೈಲ್ವಾನ್ ಚಿತ್ರದ ಪ್ರಮೋಷನ್ ಗಾಗಿ, ಕಿಚ್ಚ ಸುದೀಪ್ ರನ್ನ ಲೈವ್ ಶೋಗೆ ಆಹ್ವಾನಿಸಿತ್ತು. ಬಿಗ್ ಲಿಟಲ್ ಟೀಮ್ ಮೂಲಕ ಟ್ವಿಟರ್ ಇಂಡಿಯಾ ಟೀಮ್ ಕಿಚ್ಚ ಸುದೀಪ್ ಅವರಿಗೆ ಇನ್ವಿಟೇಶನ್ ಕೊಟ್ಟಿತ್ತು.. ಅಂದ್ಹಾಗೆ, ಟ್ವಿಟ್ಟರ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕನ್ನಡದ ಸ್ಟಾರ್ ಒಬ್ಬರಿಗೆ ಈ ಅವಕಾಶ ಕಲ್ಪಿಸಲಾಗಿತ್ತು.. ಇವತ್ತು ಸಂಜೆ ಕಿಚ್ಚ ಸುದೀಪ್ ಟ್ವಿಟ್ಟರ್ ಬ್ಲೂ ರೂಂನಿಂದ ನೇರ ಸಂಪರ್ಕದಲ್ಲಿ, ಅಭಿಮಾನಿಗಳ ಜೊತೆಗೆ, ಸಿನಿಪ್ರಿಯರ ಜೊತೆಗೆ ಮಾತನಾಡಿದ್ರು. ಅಭಿಮಾನಿಗಳು ಕೇಳೋ ಪ್ರಶ್ನೆಗಳಿಗೆ ಉತ್ತರಿಸಿದ್ರು ಸುದೀಪ್.

ಈ ವಾರ ತೆರೆಗೆ ಬರ್ತಾ ಇದೆ ಪೈಲ್ವಾನ್

ಅಂದ್ಹಾಗೆ, ಪೈಲ್ವಾನ್ ಪಂಚ ಭಾಷೆಯಲ್ಲಿ ಏಕಕಾಲದಲ್ಲಿ ಈ ವಾರ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ… ಈಗಾಗ್ಲೇ ಈ ಸಿನಿಮಾದ ಹೈಪ್ನಾನಾ ಕಾರಣಗಳಿಂದ ಮುಗಿಲು ಮುಟ್ಟಿದೆ.. ಕನ್ನಡವಷ್ಟೇ ಅಲ್ಲದೆ, ಎಲ್ಲಾ ಭಾಷೆಯ ಸಿನಿಪ್ರಿಯರಿಗೂ ಈ ಚಿತ್ರದ ಮೇಲೆ ವಿಶೇಷ ಕೂತೂಹಲ ಹುಟ್ಟಿಕೊಂಡಿದೆ.. ಟ್ರೈಲರ್ ಮತ್ತು ಹಾಡುಗಳಿಂದ ದೊಡ್ಡ ನಿರೀಕ್ಷೆ ಹುಟ್ಟಿಸಿರೋ ಈ ಚಿತ್ರದಲ್ಲಿ ಬಾದ್ಷಾ ಕಿಚ್ಚ ಸುದೀಪ, ಬಾಲಿವುಡ್ನ ಅಣ್ಣ ಸುನೀಲ್ ಶೆಟ್ಟಿ, ಆಕಾಂಕ್ಷ ಸಿಂಗ್, ಸುಶಾಂತ್ ಸಿನ್ಹಾ, ಕಬೀರ್ ದುಹಾನ್ ಸಿಂಗ್ ಸೇರಿದಂತೆ, ದೊಡ್ಡ ತಾರಾಬಳಗವಿದೆ. ಕೃಷ್ಣ ನಿರ್ದೇಶನದಲ್ಲಿ RRR ಮೋಷನ್ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ, ಸ್ವಪ್ನ ಕೃಷ್ಣ ನಿರ್ಮಾಣ ಮಾಡಿರೋ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಕರುಣಾಕರ್ ಛಾಯಾಗ್ರಹಣವಿದೆ. ಬಾಲಿವುಡ್, ಹಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಹೀಗೆ ಎಲ್ಲಾ ಭಾಷೆಯ ತಂತ್ರಜ್ಞರು, ಮತ್ತು ಕಲಾವಿದ್ರ ಸಂಗಮವಾಗಿರೋ ಪೈಲ್ವಾನ್ ಸಿನಿಮಾ, ಇದೇ ವಾರ ಅಂದ್ರೆ, 12ನೇ ತಾರೀಖು ಪ್ರೇಕ್ಷಕರೆದುರಿಗೆ ಬರ್ತಿದೆ..