ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ. ಇದೇ ಟೈಮ್ ನಲ್ಲಿ ರಿಲೀಸ್ ಆಗಿರೋ ಯಶ್ ರ ಲೇಟೆಸ್ಟ್ ಪೋಸ್ಟರ್ ಕೆಜಿಎಫ್ 2 ಸಿನಿಮಾದ ಪೋಸ್ಟರ್ ಅಂತಲೇ ಫ್ಯಾನ್ಸ್ ಕನ್ ಫ್ಯೂಸ್ ಆಗಿದ್ದಾರೆ.ಆದ್ರೆ ಯಶ್ ರ ಈ ಫೋಸ್ಟರ್ ಬಿಯರ್ಡೋ ಬ್ರಾಂಡ್ ನ ಪ್ರಚಾರದ ಪೋಸ್ಟರ್. ಅಂದಹಾಗೆ ಈ ಬಿಯರ್ಡೋ ಬ್ರಾಂಡ್ ಇದೇ ಸೆ.16ಕ್ಕೆ ರಿಲೀಸ್ ಆಗಲಿದೆ.ಇದಕ್ಕೂ ಮುನ್ನ ಇದೇ ಬ್ರಾಂಡ್ ನ ಪೋಟೋಶೂಟ್ ವೇಳೆಯ ಫೊಟೋ ಲೀಕ್ ಆಗಿ ಇದೇ ರೀತಿ ಸುದ್ದಿಯಾಗಿತ್ತು. ಕೆಜಿಎಫ್ ಸಿನಿಮಾ ನೋಡಿನೇ ದೇಶದ ಯುವಕರು ಯಶ್ ಥರಾ ಗಡ್ಡ ಬಿಡೋಕೆ ಶುರು ಮಾಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಬಿಯರ್ಡೋ ಬ್ರಾಂಡ್ ಗೆ ಯಶ್ ಪಕ್ಕಾ ಚಿನ್ನದ ಖಜಾನೆ ಆಗ್ತಾರೆ.