ನಟ ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ ಒಂದು ಶಿಕಾರಿಯ ಕಥೆ “ ಸಿನಿಮಾ ವಿಭಿನ್ನ ಟೈಟಲ್ ಹಾಗೂ ಟೀಸರ್ ಮೂಲಕ ಸದ್ದು ಮಾಡ್ತಾ ಇದ್ದು, ಇದೀಗ ಪ್ರೀಮಿಗಳ ವಿಷೇಶ ದಿನದಂದು ಸಿನಿಮಾದ ಹಾಡನ್ನು ರಿಲೀಸ್ ಮಾಡಿದ್ದು, ಸಖತ್ ವೈರಲ್ ಆಗಿದೆ.

ಹೌದು ಸಸ್ಪನ್ಸ್ , ಥ್ರೀಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸಚಿನ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದು, ಐವತ್ತರ ಆಸು ಪಾಸಿನ ಪ್ರಸಿದ್ದ ಕಾದಂಬರಿಗಾರನ ಪಾತ್ರಕ್ಕೆ ಪ್ರಮೋದ್ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಪತ್ನಿಯನ್ನು ತೊರೆದು ಏಕಾಂಗಿಯಾಗಿ ವಾಸಿಸುವ ಕಾರವಳಿ ಭಾಗದ ವಿರಕ್ತ ಕಾದಂಬರಿಕಾರನ ಬದುಕಿನಲ್ಲಿ ಎದುರಾಗುವ ಕೆಲ ಅನಿರೀಕ್ಷಿತ ತಿರುವುಗಳು, ಅವನಲ್ಲಿ ಏನೇನು ಬದಲಾವಣೆಗೆ ಕಾರಣವಾಗುತ್ತವೆ. ಜೊತೆಗೆ ” ಪೆನ್ನಿನ ಸ್ನೇಹ”, “ಕೋವಿಯ ಸಹವಾಸ” ದ ಸಸ್ಪೆನ್ಸ್ ಥ್ರೀಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿ ಬರುತ್ತಿದೆ.

ಇನ್ನು ಸಿನಿಮಾದ ಹಾಡು ಅದ್ಬುತವಾಗಿ ಮೂಡಿಬಂದಿದ್ದು, ಶಾನ್ ಗೊನ್ಸಲ್ವೇಸ್, ಸನತ್ ಬಲ್ಕೂರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದೀಗ ಪ್ರೇಮಿಗಳ ವಿಷೇಶ ದಿನದಂದು ಲವ್ ಒರಿಯಂಟೆಡ್ ಹಾಡನ್ನು ರಿಲೀಸ್ ಮಾಡಿದೆ.

ಶೆಟ್ಟಿಯವರ ಸುಮಾರು ಎರಡು ವರ್ಷಗಳ ಪರಿಶ್ರಮದ ಬಳಿಕ, ” ಒಂದು ಶಿಕಾರಿಯ ಕಥೆ” ಚಿತ್ರ ಅಂದುಕೊಂಡತೆ ಮೂಡಿಬಂದಿದ್ದು, ಯಕ್ಷಗಾನ, ಅಡಿಕೆ, ವ್ಯಾಪಾರ, ಭೋರ್ಗರೆಯುವ ಕಡಲು, ದಟ್ಟ ಕಾನನ, ತುಂಬಿ ಹರಿಯುವ ನದಿಗಳು ಈ ಎಲ್ಲ ಕರಾವಳಿ ಮತ್ತು ಮಲೆನಾಡು ಅಸ್ಮಿತೆ ಬಿಂಬಿಸುವ ಅಂಶಗಳು ಚಿತ್ರದಲ್ಲಿ ಪಾತ್ರಗಳಾಗಿ ಮಾಡಿಬಂದಿವೆ. ನೋಡುಗರಿಗೆ ಹೊಸ ಅನುಭವ ಕೊಡಲಿದೆ.

ಇನ್ನು ಚಿತ್ರದ ಬಹುತೇಕ ಚಿತ್ರೀಕರಣವನ್ನು ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ಸುಂದರ ತಾಣಗಳಲ್ಲಿ ಚಿತ್ರೀಕರಸಲಾಗಿದೆ.ಸಿನಿಮಾ ಶೂಟಿಂಗ್, ಪೋಸ್ಟ್ ಪ್ರೋಡಕ್ಷನ್ ಕೆಲಸಗಳು ಸದ್ದಿಲ್ಲದೆ ಪೂರ್ಣಗೊಂಡಿದೆ. ಸೆನ್ಸಾರ್ ನಿಂದಲೂ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದು, ಕರ್ನಾಟಕದಾದ್ಯಂತ ತೆರೆಕಾಣಲು ಸಜ್ಜಾಗಿದೆ.

ಇನ್ನು ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಅವರೊಂದಿಗೆ ಪ್ರಸಾದ್ ಚೆರ್ಕಾಡಿ, ಸಿರಿ ಪ್ರಹ್ಲಾದ್ , ಅಭಿಮನ್ಯು ಪ್ರಜ್ವಲ್, ಎಂ ಕೆ ಮಠ, ಶ್ರೀ ಪ್ರಿಯಾ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾ “ಶೆಟ್ಟಿಸ್ ಫಿಲ್ಮ್ ಫ್ಯಾಕ್ಟರಿ” ಬ್ಯಾನರ್ ನಲ್ಲಿ ರಾಜೀವ್ ಶೆಟ್ಟಿ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಯೋಗೇಶ್ ಗೌಡ ಛಾಯಾಗ್ರಹಣ, ಬಿ, ಎಸ್
ಕೆಂಪರಾಜು, ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.