ಹಾಡುಗಳು, ಟೀಸರ್ ಮತ್ತು ಟ್ರೈಲರ್ ವಿಚಾರವಾಗಿ ಸದ್ದು ಸುದ್ದಿ ಮಾಡಿದ್ದ ಹೊಸಬರ ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಲವ್ ಸಿನಿಮಾ ಮದುವೆ ಮಾಡ್ರಿ ಸರಿ ಹೋಗ್ತಾನೆ. ಈ ಸಿನಿಮಾ ಈ ವಾರ ಅಂದ್ರೆ ಮಾರ್ಚ್ 6ನೇ ತಾರೀಖು ರಾಜ್ಯದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಈ ಸಿನಿಮಾ ಸಾಕಷ್ಟು ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿದೆ. ಮದುವೆ ಮಾಡ್ರೀ ಸರಿ ಹೋಗ್ತಾನೆ… ಟೈಟಲ್ಲೇ ಹೇಳೋ ಹಾಗೇ.. ಇದು ಹದಿ ಹರೆಯದ ಮದುವೆ ಪ್ರಾಯದ ಹಳ್ಳಿ ಹುಡುಗನ ಪ್ರೀತಿ ಪ್ರೇಮ ಪ್ರಣಯ ಇತ್ಯಾದಿಗಳ ಸುತ್ತಾ ಸುತ್ತೋ, ತಿಳಿ ಹಾಸ್ಯ ಲೇಪದ, ಲವ್ ಆಕ್ಷನ್ ಥ್ರಿಲ್ಲರ್. ಸಂಪೂರ್ಣ ಉತ್ತರ ಕರ್ನಾಟಕದ ಸೊಗಡಿನಲ್ಲಿ ಚಿತ್ರಿಸಿರೋ ಅಪ್ಪಟ ಕಮರ್ಷಿಯಲ್ ಮ್ಯೂಸಿಕಲ್ ಸಿನಿಮಾ. ಮದುವೆ ಮಾಡ್ರೀ ಸರಿ ಹೋಗ್ತಾನೆ ಚಿತ್ರವನ್ನ ರಂಕಲ್ ರಾಟೇ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪರಿಚಯವಾದ, ಮೂಲತಃ ಉತ್ತರ ಕರ್ನಾಟಕದವರಾಗಿರೋ ಗೋಪಿ ಅವ್ರ ಊರ ಮಣ್ಣ ಸೊಗಡಿನ ಕಥೆಯನ್ನೇ ಸಿನಿಮಾವನ್ನಾಗಿಸಿ ಇಡೀ ಕನ್ನಡ ಸಿನಿಪ್ರಿಯರಿಗೆ ತೋರಿಸಲು ಅಣಿಯಾಗಿದ್ದಾರೆ. ಗೋಪಿ ಕೆರೂರ್ ಕಥೆಗೆ ನಿರ್ದೇಶನಕ್ಕೆ, ಎಸ್.ಎಲ್ .ಡಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಶಿವರಾಜ್ ಲಕ್ಷ್ಮಣರಾವ್ ದೇಸಾಯಿ ಬಂಡವಾಳ ಹೂಡಿದ್ದಾರೆ. ಮದುವೆ ಮಾಡ್ರೀ ಸರಿ ಹೋಗ್ತಾನೆ ಈ ಚಿತ್ರದಲ್ಲಿ ನಾಯಕನಾಗಿ ಶಿವಚಂದ್ರ ಕುಮಾರ್ ಹಾಗೂ ಆರಾಧ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕೃಷ್ಣಮೂರ್ತಿ ಕೌತಾರ್, ಚಿತ್ಕಲಾ ಬೀರಾಧರ್, ಚಕ್ರವರ್ತಿ ದಾವಣಗೆರೆ ಇವ್ರಿಗೆ ಸಾಥ್ ಕೊಟ್ಟಿದ್ದಾರೆ. ಔಟ್ ಅಂಡ್ ಔಟ್ ಮ್ಯೂಸಿಕ್ ಲವ್ ಆಕ್ಷನ್ ಥ್ರಿಲ್ಲರ್ ಅಂತ ಹೇಳ್ತೀರೋ ಈ ಚಿತ್ರದ ಮೈನ್ ಹೈಲೈಟೇ ಮ್ಯೂಸಿಕ್ ಆಗಿದ್ದು, ಅವಿನಾಶ್ ಬಾಸೂತ್ಕರ್ ಸಂಗೀತ ಸಂಯೋಜಿಸಿದ್ದಾರೆ, ಚಿತ್ರದಲ್ಲಿ ಒಟ್ಟು 11 ಹಾಡುಗಳಿದ್ದು. ಒಂದೊಂದು ಒಂದೊಂದು ಕಾರಣಕ್ಕೆ ವಿಶೇಷತೆಯಿಂದ ಕೂಡಿವೆ.
ಅಂದ್ಹಾಗೆ ದೇಶದ ದೊಡ್ಡ ದೊಡ್ಡ ಗಾಯಕರೊಂದಿಗೆ ವಿಶಿಷ್ಠ ಹಾಡುಗಳನ್ನ ಹಾಡಿಸಿ, ಅಪ್ಪಟ ಉತ್ತರ ಕರ್ನಾಟಕದ ಸೊಗಡಿನ ಚಿತ್ರವನ್ನ ಪ್ರೇಕ್ಷಕರೆದುರಿಗೆ ತರೋ ಪ್ರಯತ್ನ ಮಾಡಿರೋ ಚಿತ್ರತಂಡ ಈ ಶುಕ್ರವಾರ ಸಿನಿಮಾವನ್ನ ರಿಲೀಸ್ ಮಾಡ್ತಿದೆ.