ಕೃಷ್ಣನ್‌ ಲವ್‌ ಸ್ಟೋರಿ,ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ, ಕೃಷ್ಣಲೀಲಾ, ತಾಯಿಗೆ ತಕ್ಕ ಮಗ ಹೀಗೆ ಬರೀ ಕ್ಲಾಸ್‌ ಟೈಟಲ್‌ಗಳನ್ನೇ ಇಟ್ಕೊಂಡು ಸಿನಿಮಾಗಳನ್ನ ಮಾಡ್ತಿದ್ದ ಕೃಷ್ಣ ಅಜಯ್‌ ರಾವ್‌ ಈ ನಡುವೆ ಧೈರ್ಯಂ ದಂಥಾ ಮಾಸ್‌ ಟೈಟಲ್‌ನೊಂದಿಗೆ ಸಿನಿಮಾಮಾಡಿ ಕೈ ಸುಟ್ಟುಕೊಂಡಿದ್ರು, ಆದ್ರೂ ಈಗ ಮತ್ತೊಂದು ಮಾಸ್‌ ಟೈಟಲ್‌ ಜೊತೆಗೆ ಪಕ್ಕಾ ಎಂಟರ್‌ಟೈನಿಂಗ್‌ ಸಬ್ಜೆಕ್ಟ್‌ ಇರೋ ʻಶೋಕಿಲಾಲʼ ಅನ್ನೋ ಸಿನಿಮಾನ ಮೂಲಕ ತೆರೆಗೆ ಬರೋಕೆ ರೆಡಿಯಾಗಿದ್ದಾರೆ. ಈಗ ಸಿನಿಮಾದ ಫಸ್ಟ್‌ ಮೋಷನ್‌ ಪೋಸ್ಟರ್‌ ಕೂಡ ರಿಲೀಸ್‌ ಆಗಿದೆ.

ಕಲರ್‌ಫುಲ್‌ ಶೋಕಿಲಾಲನ ಕಲರ್ರೇ ಬೇರೆ

ನವನಿರ್ದೇಶಕ ಜಾಕಿ ಆಕ್ಷನ್‌ ಕಟ್‌ ಹೇಳ್ತಿರೋ ಶೋಕಿಲಾಲ ಸಿನಿಮಾಕ್ಕೆ ಅಯೋಗ್ಯ, ಚಮಕ್‌ ಸಿನಿಮಾಗಳ ನಿರ್ಮಾಪಕ ಟಿ.ಆರ್‌ ಚಂದ್ರಶೇಖರ್‌ ಬಂಡವಾಳ ಹಾಕಿದ್ದಾರೆ. ಚಿತ್ರಕ್ಕೆ ಅಜಯ್‌ ರಾವ್ ರ ಟ್ರಂಪ್‌ ಕಾರ್ಡ್‌ ಮ್ಯೂಸಿಕ್‌ ಡೈರೆಕ್ಟರ್‌ ಶ್ರೀಧರ್‌ ಸಂಭ್ರಮ್‌ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ.ಮೋಷನ್‌ ಪೋಸ್ಟರ್‌ ಕಲರ್‌ಫುಲ್ಲಾಗಿದ್ದು,ಸಿನಿಮಾನೂ ಇಷ್ಟೆ ಕಲರ್‌ ಫುಲ್ಲಾಗಿರೋದ್ರಲ್ಲಿ ಡೌಟೇ ಇಲ್ಲ. ಅಂದಹಾಗೆ ಅಜಯ್‌ ಗೆ ನಾಯಕಿ ಕೆಮಿಸ್ಟ್ರಿ ಆಫ್‌ ಕರಿಯಪ್ಪ ನಾಯಕಿ ಸಂಜನಾ ಆನಂದ್‌ ನಾಯಕಿಯಾಗಿದ್ದಾರೆ.