ಕನ್ನಡದ ನಂ.೧ ಮನೋರಂಜನ ವಾಹಿನಿ ಜೀ ಕನ್ನಡದಲ್ಲಿ ಇಂದು ರಾತ್ರಿ ೮.೩೦ರಿಂದ ಸಾಹಸಸಿಂಹ ವಿಷ್ಣುವರ್ಧನ್‌ ಅಳಿಯ, ಕನ್ನಡದ ಜನಪ್ರಿಯ ನಟ ಅನಿರುದ್ಧ್‌ ನಟನೆಯ ಜೊತೆ ಜೊತೆಯಲಿ ಸೀರಿಯಲ್‌ ಪ್ರಸಾರ ಆರಂಭವಾಗಿದೆ. ಜೊತೆ ಜೊತೆಯಲಿ ಸೀರಿಯಲ್‌ ಮೂಲಕ ಅನಿರುದ್ಧ್‌ ಜತ್ಕರ್‌ ಕಿರುತೆರೆಗ ಅಧಿಕೃತವಾಗಿ ಎಂಟ್ರಿಕೊಡ್ತಾ ಇದ್ದಾರೆ. ಈಗಾಗ್ಲೆ ಸೀರಿಯಲ್‌ನ ಪ್ರೋಮೋಗಳು ರಿಲೀಸ್‌ ಆಗಿದ್ದು, ಕಮಾಲ್‌ ಮಾಡ್ತಿವೆ. ಈ ಹಿಂದೆ ಜೊತೆ ಜೊತೆಯಲ್ಲಿ ಅನ್ನೋ ಟೈಟಲ್‌ನಲ್ಲೇ ಬಂದಿದ ಜೀ ವಾಹಿನಿಯ ಸೀರಿಯಲ್‌ ಪಾಪ್ಯುಲರ್‌ ಆಗಿತ್ತು.

ವಯಸುಗಳ ನಡುವೆ, ಮನಸುಗಳ ಮದುವೆ..!

೪೫ ವರ್ಷದ ವಯಸ್ಸಿನ ಅವಿವಾಹಿತ ಕೋಟ್ಯಾಧಿಪತಿ, ವರ್ಧನ್‌ ಗ್ರೂಪ್‌ ಆಫ್‌ ಕಂಪೆನಿಯ ಮಾಲೀಕ ಆರ್ಯವರ್ಧನ್‌ ಪಾತ್ರದಲ್ಲಿ ಅನಿರುದ್ಧ್‌ ನಟಿಸ್ತಾ ಇದ್ದಾರೆ. ಅನಿರುದ್ಧ್‌ಗೆ ಜೋಡಿಯಾಗಿ ೨೦ ವರ್ಷದ ಕಾಲೇಜು ಹುಡುಗಿ ಅನು ಪಾತ್ರದಲ್ಲಿ ಮೇಘನಾ ಶೆಟ್ಟಿ ನಟಿಸಿದ್ದಾರೆ. ಈ ಹಿಂದೆ ಜೋಡಿಹಕ್ಕಿ ಸೀರಿಯಲ್‌ ನಿರ್ಮಾಣ, ನಿರ್ದೇಶನ ಮಾಡಿದ್ದ ಆರೂರು ಜಗದೀಶ್‌ ಈ ಸೀರಿಯಲ್‌ಗೂ ಸಾರಥಿ. ೨೫ ವರ್ಷ ವಯಸ್ಸಿನ ಅಂತರವಿರೋ, ಅಂತಸ್ತಿನಲ್ಲಿ ಅಂತರವಿರೋ ಇಬ್ಬರ ನಡುವಿನ ಪ್ರೇಮ್‌ ಕಹಾನಿಯೇ ಈ ಜೊತೆ ಜೊತೆಯಲಿ ಸೀರಿಯಲ್‌. ಸಿನಿಮಾಗಳಿಂದ ದೂರವೇ ಉಳಿದಿರೋ ಅನಿರುದ್ಧ್‌ರನ್ನ ಟಿವಿ ಪ್ರೇಕ್ಷಕರು ಹೇಗೆ ವೆಲ್ಕಮ್‌ ಮಾಡ್ತಾರೋ ಕಾದು ನೋಡ್ಬೇಕು.