ಅಳಿದು ಉಳಿದವರು… ನಿರ್ಮಾಪಕ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿರೋ ಬಹುಮುಖ ಪ್ರತಿಭೆ ಅಶುಬೇದ್ರಾ ಚೊಚ್ಚಲ ಬಾರಿಗೆ ನಾಯಕನಾಗಿ ನಿರ್ಮಾಪಕನಾಗಿ ಸಿದ್ದವಾಗ್ತಿರೋ ಸಿನಿಮಾ ಅಳಿದು ಉಳಿದವರು. ಈ ಚಿತ್ರದ ಟೈಟಲ್ ರಿಲೀಸ್ ಆದಾಗ್ಲೇ ಈ ಸಿನಿಮಾ ಮೇಲೆ ವಿಶೇಷವಾದ ಕುತೂಹಲ ಹುಟ್ಟಿಕೊಂಡಿತ್ತು. ಇದೀಗ ಈ ಚಿತ್ರದ ಮೊದಲ ನೋಟ ಅಂದ್ರೆ  ಫಸ್ಟ್ ಲುಕ್  ಪೋಸ್ಟರ್ ನ ರಿಲೀಸ್ ಮಾಡಲಾಗಿದೆ.
ರಿಕ್ಷಿತ್ ಶೆಟ್ಟಿಯವರಿಂದ ಅಳಿದು ಉಳಿದವರು ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಉಳಿದವರು ಕಂಡಂತೆಯಿಂದ ಚಾರ್ಮ್ ಚೇಂಜ್ ಮಾಡಿಕೊಂಡ ಕಿರಿಕ್ ಸ್ಟಾರ್ ರಕ್ಷಿತ್ ಶೆಟ್ಟಿ ಇದೀಗ ಅವನೇ ಶ್ರೀಮನ್ನಾರಾಯಣ ಸಿನಿಮಾ ಮೂಲಕ ಬಹುಭಾಷೆಯಲ್ಲಿ ಛಾಪನ್ನೊತ್ತಲು ಅಣಿಯಾಗಿದ್ದಾರೆ. ಈ ನಡುವೆ ಈ ಉಳಿದವರು ಕಂಡ ಶ್ರೀಮನ್ನಾರಾಯಣ ಅಳಿದು ಉಳಿದವರು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ ರಿಲೀಸ್ ಮಾಡಿ. ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಅಳಿದು ಉಳಿದವರು ಅರವಿಂದ್ ಶಾಸ್ತ್ರೀ ನಿರ್ದೇಶನದಲ್ಲಿ ಮೂಡಿ ಬಂದಿರೋ ಸಿನಿಮಾ. ಟೈಟಲ್ಲೇ ಹೇಳೋ ಹಾಗೇ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಅದೇ ಕಾರಣಕ್ಕೆ ಫಸ್ಟ್ ಲುಕ್ ಪೋಸ್ಟರ್ ಕೂಡ ಪತ್ತೆದಾರಿ ಮಾದರಿಯಲ್ಲಿದೆ. ಅಂದ್ಹಾಗೆ ಈ ಚಿತ್ರದ ಮೂಲಕ ನಿರ್ಮಾಪಕ ಅಶುಬೇದ್ರಾ ಹೀರೋ ಆಗಿ ಪರಿಚಯವಾಗ್ತಿದ್ದು, ಇವರಿಗೆ ನಾಯಕಿಯಾಗಿ ಸಂಗೀತ ಭಟ್ ನಟಿಸಿದ್ದಾರೆ. ಜೊತೆಗೆ ಅತುಲ್ ಕುಲಕರ್ಣಿ ಹಾಗೂ ಲೂಸಿಯಾ ಪವನ್ ಕುಮಾರ್ ಅಂತಹ ಘಟಾನುಘಟಿಗಳು ಚಿತ್ರದಲ್ಲಿರೋದು ಚಿತ್ರದ ಮತ್ತೊಂದು ದೊಡ್ಡ ಪ್ಲಸ್ ಪಾಯಿಂಟ್. ಮಿದುನ್ ಮುಕುಂದನ್ ಸಂಗೀತ ಸಂಯೋಜನೆ, ಅಭಿಶೇಕ್ ಕಾಸರಗೂಡು, ಅರವಿಂದ್ ಕಶ್ಯಪ್ , ಅಭಿನ್ ರಾಜೇಶ್ ಛಾಯಾಗ್ರಹಣ ಈ ಚಿತ್ರಕ್ಕಿದೆ, ಎಲ್ಲಾ ನಿಪುಣ ತಂತಜ್ಞರು ಹಾಗೂ ಪ್ರತಿಭಾವಂತ ಕಲವಾವಿದ್ರು ಇತೋ ಈ ಚಿತ್ರದ ಫಸ್ಟ್ ಲುಕ್  ರಿಲೀಸ್ ಮಾಡೋ ಮೂಲಕ ಪ್ರಚಾರದ ಕೆಲಸ ಶುರುಮಾಡಿದೆ. ಸದ್ಯದಲ್ಲೇ ಟೀಸರ್ ರಿಲೀಸ್ ಗೆ ಪ್ಲಾನ್ ಮಾಡಿರೋ ಚಿತ್ರತಂಡ ಅವತ್ತು ಈ ಚಿತ್ರದ ಕುರಿತ ಮತ್ತಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನ ಬಿಟ್ಟುಕೊಡಲಿದೆ.